ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ಯಕ್ಷಗಾನ ಪ್ರಸಂಗ ಮಾಲಿಕೆ

Author : ಎಚ್.ಬಿ.ಎಲ್. ರಾವ್



Year of Publication: 1998
Published by: ಪದವೀಧರ ಯಕ್ಷಗಾನ ಸಮಿತಿ, ಮುಂಬಯಿ

Synopsys

ಎಚ್.ಬಿ.ಎಲ್.ರಾವ್ ಅವರು ಸಂಪದಿಸಿರುವ ಕೃತಿ ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ಯಕ್ಷಗಾನ ಪ್ರಸಂಗ ಮಾಲಿಕೆ. ಪದವೀಧರ ಯಕ್ಷಗಾನ ಸಮಿತಿ ಮುಂಬಯಿ ಈ ಸಂಸ್ಥೆಯು ಪ್ರಕಟಿಸಿದ ಹದಿನೆಂಟನೇ ಪ್ರಸಂಗ ಸಂಪುಟವಿದು. ಶ್ರೀ ಭಾಸ್ಕರ ಹೊಸಬೆಟ್ಟು ಇದರ ಉಪಸಂಪಾದಕರು. ಈ ಕೃತಿಗೆ ಮುನ್ನುಡಿಯನ್ನು ಬರೆದವರು ಶ್ರೀ ತಾಳ್ತಜೆ ವಸಂತಕುಮಾರ ಅವರು. ಪದವೀಧರ ಯಕ್ಷಗಾನ ಸಮಿತಿ ಮುಂಬಯಿಯ ಯಕ್ಷಗಾನ ಕಲಾ ಸಂಬಂಧೀ ಚಟುವಟಿಕೆಗಳನ್ನು ಡಾ. ತಾಳ್ತಜೆ ವಸಂತಕುಮಾರರು ತಮ್ಮ ಮುನ್ನುಡಿ ಲೇಖನದಲ್ಲಿ ಶ್ಲಾಘಿಸಿದ್ದಾರೆ. ಶ್ರೀ ಎಚ್.ಬಿ.ಎಲ್.ರಾಯರು ತಮ್ಮ ಸಂಪದಕೀಯ ಬರಹದಲ್ಲಿ ಸಹಕರಿಸಿದ ಎಲ್ಲರನ್ನೂ ನೆನಪಿಸಿಕೊಂಡಿರುತ್ತಾರೆ.

ಇನ್ನೂರಕ್ಕೂ ಹೆಚ್ಚು ಪುಟಗಳಿಂದ ಕೂಡಿದ ಪುಸ್ತಕ ಇದು. ಒಟ್ಟು ಆರು ಪ್ರಸಂಗಗಳನ್ನು ನೀಡಲಾಗಿದೆ. ಶ್ರೀ ಗುರುನಾರಾಯಣಸ್ವಾಮಿ ಚರಿತ್ರೆ (ಅಗರಿ ಶ್ರೀನಿವಾಸ ಭಾಗವತ ವಿರಚಿತ), ಭುವನ ಭಾಗ್ಯ (ಅಮೃತ ಸೋಮೇಶ್ವರ ವಿರಚಿತ), ಸತ್ಯಂ ವದ-ಧರ್ಮಂ ಚರ (ಎಂ. ನಾರ್ಣಪ್ಪ ಉಪ್ಪೂರ), ಮಾತಂಗ ಕನ್ಯೆ (ಬಿ. ಪುರುಷೋತ್ತಮ ಪೂಂಜ) ರಾಜಕುಮಾರಿ ನಂದಿನಿ ಚರಿತೆ (ಭಾಸ್ಕರ ಹೊಸಬೆಟ್ಟು), ಶ್ರೀ ಸತ್ಯನಾರಾಯಣ ವ್ರತ ಮಹಾತ್ಮೆ (ವೇದಮೂರ್ತಿ ಮಧುಸೂದನ ಭಟ್ಟ, ಕಬ್ಬಿನಾಲೆ), ಆರು ಮಂದಿ ಕವಿಗಳ ಆರು ಪ್ರಸಂಗಗಳನ್ನು ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ಯಕ್ಷಗಾನ ಮಾಲಿಕೆ ಎಂಬ ಕೃತಿಯಾಗಿ ಮುದ್ರಿಸಲಾಗಿದ್ದು, ಇದು ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರನ್ನು ನೆನಪಿಸಿ ಗೌರವಿಸಿದಂತಾಗಿದೆ.

About the Author

ಎಚ್.ಬಿ.ಎಲ್. ರಾವ್
(20 September 1933)

‌ಎಚ್.ಬಿ.ಎಲ್. ರಾವ್ ಅವರು ಯಕ್ಷಗಾನ (ಜನನ: 20-09-1933) ಕಲಾವಿದರು. ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾಮದವರು. ತಂದೆ ಎಚ್.ಪಿ.ರಾವ್, ತಾಯಿ ಸೀತಾರತ್ನ. ಬೆಂಗಳೂರು, ಮದರಾಸು ಹೊಟೇಲುಗಳಲ್ಲಿ.ಕೆಲಸ ಮಾಡಿದರು. ಕೇಂದ್ರ ಸರಕಾರದ ಎಕ್ಸೈಸ್ ಕಮೀಷನರ್ ಕಚೇರಿಯಲ್ಲಿ ಉದ್ಯೋಗ ಸಿಕ್ಕಿತು. ಸಂಸ್ಕೃತ ಮತ್ತು ತತ್ತ್ವಜ್ಞಾನದಲ್ಲಿ ಎಂ.ಎ. ಪದವೀಧರರು. ಮುಂಬೈ ವಿಶ್ವವಿದ್ಯಾಲಯದಿಂದ ಕಾನೂನು ಪದವೀಧರರು.  ‘ಯಕ್ಷಗಾನ ಕವಿಚರಿತೆ’ ವಿಷಯವಾಗಿ ಮುಂಬೈವಿವಿಯಲ್ಲಿ ಹೆಸರು  ನೋಂದಾಯಿಸಿದರೂ ಪದವಿ ಪಡೆಯಲಾಗಲಿಲ್ಲ. ‘ಪದವೀಧರ ಯಕ್ಷಗಾನ ಸಮಿತಿ ಸ್ಥಾಪಿಸಿದರು. ಯಕ್ಷಗಾನ ಸಮ್ಮೇಳನಗಳು. ಯಕ್ಷಗಾನ ಕಲಾವಿದರನ್ನು ಕರೆಸಿ ಸನ್ಮಾನ. ಕೃತಿಗಳು : ಯಕ್ಷಗಾನ ಮುಖವರ್ಣಿಕೆ, ಔರ್ಧ್ವ ದೇಹಿಕ ವಿ, ಶಿವಳ್ಳಿ ಬ್ರಾಹ್ಮಣರು ಭಾಗ-1, ನಮನ, ಶಿವಳ್ಳಿ ಬ್ರಾಹ್ಮಣರು ಭಾಗ-2, ...

READ MORE

Related Books