About the Author

ಜಯಪ್ರಕಾಶ್ ಶೆಟ್ಟಿ ಹೆಚ್ ಅವರು ಮೂಲತಃ ಕುಂದಾಪುರ ಗ್ರಾಮದ ಅಂಪಾರಿನವರು. ವೃತ್ತಿಯಲ್ಲಿ ಅಧ್ಯಾಪಕರು. ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಪದವಿ ವಿದ್ಯಾಭ್ಯಾಸವನ್ನು ಬಸ್ರೂರಿನಲ್ಲಿಯೇ ಪೂರೈಸಿದರು. 1993ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿಯನ್ನು ಪಡೆದು, ಪ್ರೊ ರಹಮತ್ ತರಿಕೆರೆಯವರ ಮಾರ್ಗದರ್ಶನದಲ್ಲಿ ‘ಪಂಪಕಾವ್ಯಗಳ ವಿಭಿನ್ನ ಓದುಗಳು: ತಾತ್ವಿಕ ವಿಶ್ಲೇಷಣೆ’ ಮಹಾಪ್ರಬಂಧವನ್ನು ಮಂಡಿಸಿ, 2014ರಲ್ಲಿ ಹಂಪಿ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ ಪದವಿಯನ್ನು ಪಡೆದರು. ಪ್ರಸ್ತುತ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2016ನೇ ಸಾಲಿನ ಪಂಪ ಪ್ರಶಸ್ತಿ, ಕನಕಶ್ರೀ, ಕುಂದಣಗಾರ, ಅತ್ತಿಮಬ್ಬೆ, ಸಂಗೊಳ್ಳಿ ರಾಯಣ್ಣ ಆಯ್ಕೆ ಸಮಿತಿ ಸದಸ್ಯರಾಗಿಯೂ, ಜಿಲ್ಲಾ ಕನ್ನಡ ಕಾವಲು ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಕೃತಿಗಳು: ಹೊಳೆಯೆಂಬ ಹೊನ್ನ ಹರಿವು, ಶಬ್ಧದ ಲಜ್ಜೆಯ ನೋಡಾ, ಬೆಳಗಿನೊಳಗಣ ಬೆಳಕು, ಕನಕ ಮತ್ತು ಕನ್ನಡ ಕಾಲು ದಾರಿ ಮನಸ್ಸು, ನೆಲದ ನೆನಪು, ರೂಪಮಂಧರಿಯಿಸಿನಿಂದುದಲ್ತು, ಅನೇಕರ ಅನೇಕಾಂತ, ಬಯಲ ಬೆರಗು, ತಣ್ಣನೆಯ ದೀಪಗಳು, ನುಡಿಯ ನಡೆಯಾಟ

ಪ್ರಶಸ್ತಿಗಳು: ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕನಕ ಯುವ ಪುರಸ್ಕಾರ

ಹೆಚ್. ಜಯಪ್ರಕಾಶ್ ಶೆಟ್ಟಿ