About the Author

ಲೇಖಕಿ ಹೆಚ್.ಆರ್. ಚೇತನ ಅವರು  ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹನುಮನಹಳ್ಳಿಯವರು. ತಂದೆ ಹ.ಕ. ರಾಜೇಗೌಡ, ತಾಯಿ ಎನ್.ಜಿ. ಲಲಿತ. ಜಾನಪದ ವಿಷಯದಲ್ಲಿ ಎಂ.ಎ., ಪಿಎಚ್.ಡಿ. ಪದವೀಧರರು. ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನ ಜಾನಪದ ವಿಭಾಗದ ಮುಖ್ಯಸ್ಥರು. ಮೂಡಲಪಾಯ ಯಕ್ಷಗಾನ ಕುರಿತು ಸಂಶೋಧನಾ ಪ್ರಬಂಧ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಶಿಕ್ಷಣ, ಸಾಹಿತ್ಯ, ಜಾನಪದಕ್ಕೆ ಸಂಬಂಧಿಸಿದ ಹಲವು ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಕೃತಿಗಳು : ಗ್ರಾಮಾಂತರ, ಗ್ರಾಮಾಂತರಂಗ, ಜಾನಪದ ಕುಣಿತಗಳು, ಜಾನಪದ ಜೊಂಪ, ಹೆಳವರು ಹೇಳಿದ ಕರಿರಾಜನ ಕತೆ, ಹೆತ್ತಗೋನಹಳ್ಳಿ ಮಾಯಮ್ಮ, ಕುವೆಂಪು ಸಾಹಿತ್ಯದಲ್ಲಿ ಕುಟುಂಬ ಪರಿಕಲ್ಪನೆ, ಕನ್ನಡದ ವೆರಿಯರ್‌ ಎಲ್ವಿನ್ ಎಚ್.ಎಲ್. ನಾಗೇಗೌಡ, 'ಮೂಡಲಪಾಯ ಯಕ್ಷಗಾನ', 'ಅಭಿನವ ಮೆಕೆಂಜಿ ಎಚ್.ಎಲ್. ನಾಗೇಗೌಡ.

ಪ್ರಶಸ್ತಿ-ಪುರಸ್ಕಾರಗಳು: ‘ಸಮುದ್ರರಾಜನ ಮಗಳು ಮತ್ತು ಇತರ ಕಥೆಗಳು' ಕೃತಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಹೆಚ್.ಆರ್. ಚೇತನ