About the Author

ಖ್ಯಾತ ಕತೆಗಾರ-ಪತ್ರಕರ್ತ ಪಿ. ಲಂಕೇಶ್ ಅವರ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಿರುವ ಡಾ. ಹಾಲತಿ ಸೋಮಶೇಖರ ಅವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹಾಲತಿಯವರು. 1963ರ ಫೆಬ್ರುವರಿ 25ರಂದು ಜನಿಸಿದ ಅವರು ಎಂ.ಎ., ಪಿಎಚ್.ಡಿ., ಎಂ.ಎಡ್. ಮಾಡಿ ಶಿಕ್ಷಣಾಧಿಕಾರಿ ಆಗಿದ್ದಾರೆ.

ಪಿ. ಲಂಕೇಶ, ಮಹಿಳಾ ಚಳವಳಿ, ಸ್ತ್ರೀಪರ, ಓದುವ ಸುಖ, ಸಾಯೋಆಟ-ವಿಮರ್ಶೆ (ವಿಮರ್ಶೆ) ಅವರ ಪ್ರಕಟಿತ ಕೃತಿಗಳು. ಪಿ. ಲಂಕೇಶ ಸಾಹಿತ್ಯ  ಅವರ ಪಿಎಚ್.ಡಿ. ಮಹಾಪ್ರಬಂಧ.

ಹಾಲತಿ ಸೋಮಶೇಖರ್‌

(25 Feb 1963)