About the Author

ಹನುಮಂತ.ಮ. ದೇಶಕುಲಕರ್ಣಿ ಅವರು ಪತ್ರಕರ್ತನಾಗಿ, ಲೇಖಕನಾಗಿ, ಸಂಘಟಕನಾಗಿ , ಕವಿಯಾಗಿ, ವ್ಯಂಗ್ಯ ಚಿತ್ರಕಾರನಾಗಿ ಹೀಗೆ ವಿವಿಧ ಪ್ರಕಾರಗಳಲ್ಲಿ ಹೆಸರು ಮಾಡಿದವರು.  ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗುತ್ತಿದ್ದು ಅವುಗಳಲ್ಲಿ ಸಾಮಾಜಿಕ, ಧಾರ್ಮಿಕ , ಸಾಂಸ್ಕೃತಿಕ, ಶೈಕ್ಷಣಿಕ ಮುಂತಾದ ವಿಷಯಗಳು ತುಂಬಿರುತ್ತವೆ. ಇವರ ಪ್ರಬುದ್ಧ ಲೇಖನಗಳು ನಾಡಿನ ಹೆಸರಾಂತ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕದಲ್ಲಿ, ಮಾಸ ಪತ್ರಿಕೆಯಲ್ಲಿ 4,000ಕ್ಕೂ ಮಿಕ್ಕಿ ಲೇಖನಗಳು ಪ್ರಕಟವಾಗಿವೆ. "ಟಾಂಗಣ್ಣ" ಹೆಸರಿನಲ್ಲಿ ಓರೆಕೋರೆಗಳಿಗೆ ಭೂತಗನ್ನಡಿ ಹಿಡಿಯುವ ಹಾಸ್ಯ ಪಾತ್ರವನ್ನು ಸೃಷ್ಟಿಸಿಕೊಂಡು ಹಾಸ್ಯ ಬರಹಗಳನ್ನು ಬರೆಯುತ್ತ ಬಂದಿರುವ ಇವರು ತಿಳಿಹಾಸ್ಯದ ಮೂಲಕ ನಗಿಸುತ್ತಾರೆ. ’ಅಂಬರಗಾಮಿ’ ಎಂಬ ಕಾವ್ಯನಾಮ ಇಟ್ಟುಕೊಂಡು ನೂರಾರು ಉತ್ತಮ ಕವನಗಳನ್ನು ಬರೆದಿದ್ದಾರೆ. 'ಪ್ರತ್ಯಗ್ರ’ ಎಂಬ ಪ್ರಣವಾನಂದ ಶ್ರೀಗಳು ನೀಡಿದ ಬಿರುದನ್ನು ಅಂಕಿತವಾಗಿಸಿಕೊಂಡು ಭಾವನೆಗಳ ಕುರಿತು, ಮನಸ್ಸಿಗೆ ನಾಟುವ ಉಕ್ತಿಯನ್ನು ಬರೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಒಳಪಟ್ಟಿವೆ. ವಿವಿಧ ವಿಚಾರ ಹಾಗೂ ವಿಶಿಷ್ಟ ಬರಹಗಳನ್ನು ಓದುಗರಿಗೆ ಮುದ ನೀಡುವ ಬರಹಗಳ ಗುಚ್ಛವಾದ ' ಶ್ರೀಕಾರ" ಎಂಬ ಹೆಸರಿನ ಕೃತಿಯು ಬಿಡುಗಡೆಯಾಗಲಿದೆ. ಓಂಕಾರ, ಶ್ರೀ ಗಣೇಶಾಂಜನೇಯ ಕ್ಷೇತ್ರದರ್ಶನ ಕೃತಿ ಬಿಡುಗಡೆಯಾಗಿವೆ.

ಹನುಮಂತ.ಮ. ದೇಶಕುಲಕರ್ಣಿ

Books by Author