About the Author

ಜಹಾನ್ ಆರಾ, ಮಂಡ್ಯ ಜಿಲ್ಲೆಯ ಮದ್ದೂರಿನ ಉದಯೋನ್ಮುಖ ಕವಯಿತ್ರಿ. ಜಹಾನ್ ಆರಾ ಹೆಚ್ ಕೋಳೂರು ಎಂಬ ನಾಮಾಂಕಿತದಲ್ಲಿ ಕಾವ್ಯ ರಚನೆ ಮಾಡುತ್ತಿದ್ದಾರೆ. ವೃತ್ತಿಯಿಂದ ಶಿಕ್ಷಕಿ, ಪ್ರಸ್ತುತ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಂದೆ ಹೆಚ್.ಶೌಕತ್ ಅಲಿ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಕನ್ನಡ ಶಿಕ್ಷಕರಾಗಿ ನಿವೃತ್ತಿಯಾಗಿದ್ದಾರೆ, ಸಾಹಿತಿಯಾಗಿ ಜನಪದ ಸಂಶೋಧಕರಾಗಿಯೂ ಕೆಲ ಮಾಡಿದ್ದಾರೆ. ತಾಯಿ ನೂರ್ ಜಹಾನ್. ಮನೆಯ ಮೂರು ಜನ ಮಕ್ಕಳಲ್ಲಿ ಜಹಾನ್​ ಆರಾ ಜ್ಯೇಷ್ಠ ಪುತ್ರಿ, ಇಬ್ಬರು ಸಹೋದರರಿದ್ದಾರೆ. ಜಹಾನ್ ಆರಾ ಅವರ ಮೊದಲ ಕವನ ಸಂಕಲನ ಭಾವಜೀವ. 

ಜಹಾನ್ ಆರಾ