ಹಂಗಿಲ್ಲದ ಹಾದಿ

Author : ಜಹಾನ್ ಆರಾ

Pages 1

₹ 1.00




Year of Publication: 2019
Published by: ಮೊಹಾಲಿಯ ಪ್ರಕಾಶನ
Address: 1

Synopsys

ಕವಯತ್ರಿ ಜಹಾನ್ ಆರಾ ಅವರ ಎರಡನೇ ಕವನ ಸಂಕಲನ ’ಹಂಗಿಲ್ಲದ ಹಾದಿ’. 

ಬದುಕಿನ ಬಹಳಷ್ಟು ತಿರುವುಗಳನ್ನು, ಅನುಭವಗಳನ್ನು, ಮತ್ತು ಸಮಾಜದ ವಿವಿಧ ಮುಖಗಳನ್ನು ಪರಿಚಯಿಸುತ್ತಾರೆ. ಈ "ಹಂಗಿಲ್ಲದ ಹಾದಿ" ಕವನಸಂಕಲನದ ಎದೆಯಲ್ಲಿ ೫೦ ಭಿನ್ನ ವಿಭಿನ್ನವಾದ ಹಾದಿಗಳ ಪರಿಚಯ ಓದುಗನಿಗೆ ದಕ್ಕುತ್ತದೆ. ಸಾಮಾಜಿಕ ಕಳಕಳಿ ಮತ್ತು ಹೆಣ್ಣಿನ ಅಂತರಾಳದ ನೋವುಗಳನ್ನು ಬಿಂಬಿಸುವ, ಮತ್ತು ಮಹಿಳಾಪರ ದ್ವನಿಯನ್ನು ಹೊರಹಾಕುವ ಕೆಲವು ಕವಿತೆಗಳನ್ನೂ ಇಲ್ಲಿ ಕಾಣಬಹುದು. 

About the Author

ಜಹಾನ್ ಆರಾ

ಜಹಾನ್ ಆರಾ, ಮಂಡ್ಯ ಜಿಲ್ಲೆಯ ಮದ್ದೂರಿನ ಉದಯೋನ್ಮುಖ ಕವಯಿತ್ರಿ. ಜಹಾನ್ ಆರಾ ಹೆಚ್ ಕೋಳೂರು ಎಂಬ ನಾಮಾಂಕಿತದಲ್ಲಿ ಕಾವ್ಯ ರಚನೆ ಮಾಡುತ್ತಿದ್ದಾರೆ. ವೃತ್ತಿಯಿಂದ ಶಿಕ್ಷಕಿ, ಪ್ರಸ್ತುತ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಂದೆ ಹೆಚ್.ಶೌಕತ್ ಅಲಿ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಕನ್ನಡ ಶಿಕ್ಷಕರಾಗಿ ನಿವೃತ್ತಿಯಾಗಿದ್ದಾರೆ, ಸಾಹಿತಿಯಾಗಿ ಜನಪದ ಸಂಶೋಧಕರಾಗಿಯೂ ಕೆಲ ಮಾಡಿದ್ದಾರೆ. ತಾಯಿ ನೂರ್ ಜಹಾನ್. ಮನೆಯ ಮೂರು ಜನ ಮಕ್ಕಳಲ್ಲಿ ಜಹಾನ್​ ಆರಾ ಜ್ಯೇಷ್ಠ ಪುತ್ರಿ, ಇಬ್ಬರು ಸಹೋದರರಿದ್ದಾರೆ. ಜಹಾನ್ ಆರಾ ಅವರ ಮೊದಲ ಕವನ ಸಂಕಲನ ಭಾವಜೀವ.  ...

READ MORE

Related Books