About the Author

ಜರಗನಹಳ್ಳಿ ಶಿವಶಂಕರ್ ಅವರು ಬೆಂಗಳೂರಿನ ಜರಗನಹಳ್ಳಿಯಲ್ಲಿ 1949 ಸೆಪ್ಟೆಂಬರ್ 8ರಂದು ಜನಿಸಿದರು.ಬಿ.ಕಾಂ ಪಧವಿದರರಾಗಿದ್ದ ಅವರು ಕೆನರಾ ಬ್ಯಾಂಕಿನಲ್ಲಿ 28 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಸಾಹಿತ್ಯ ಒಲವಿನ ಕ್ಷೇತ್ರ. ಕನ್ನಡದ ಪ್ರಮುಖ ನಿಯತಕಾಲಿಕೆಗಳಲ್ಲಿ ಇವರ ಹನಿಗವಿತೆಗಳು, ಕವಿತೆಗಳು ಲೇಖನಗಳು ಪ್ರಕಟಗೊಳ್ಳುತ್ತಿದ್ದವು. ಪುಸ್ತಕ ಪ್ರಕಾಶನವೊಂದನ್ನು ಆರಂಭಿಸಿರುವ ಇವರು ಬರೆದ ಪ್ರಮುಖ ಕೃತಿಗಳೆಂದರೆ 'ಶುಭಾಂಗಿ ಝರಿ; ದೇವರ ನೆರಳು, ಎರೆಹುಳ, ಆಲಿಕಲ್ಲು ಮುಂತಾದವು. ಇವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರು 2021 ಮೇ 05 ರಂದು ಕೊರೋನಾ ಸೋಂಕಿಗೆ ಬಲಿಯಾಗಿ ನಿಧನರಾದರು.

ಕೃತಿಗಳು: ಬುಗ್ಗೆ, ಮರಗಳೂ, ಮಳೆ, ಆಯ್ದ ಹನಿಗವಿತೆಗಳು, ವಚನ ಧ್ಯಾನ, ಹೊಳೆ, ಮರಗಳು, ನಾದೋತ್ಸವ, ವಚನ ಛಾಯೆ, ಭವ ಬದುಕು, ನೆನಪಿನ ನೆಂಟರು, ಚಾತಕ, ಜೊತೆಯಾದವರು, ಬೇರು ಚಿಗುರು, ಅಕ್ಷರ ತಾಂಬೂಲ, ವಚನ ಸಂಗಮ.

ಪ್ರಶಸ್ತಿಗಳು: ಚುಟುಕು ರತ್ನ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಸೇತು ಪ್ರಶಸ್ತಿ, ಸರ್.ಎಂ. ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಸುವರ್ಣ ಕರ್‍ನಾಟಕ ರಜ್ಯೋತ್ಸವ ಪ್ರಶಸ್ತಿ, ದಿನಕರ ದೇಸಾಯಿ ಸಾಹಿತ್ಯ ಪ್ರಶಸ್ತಿ, ಸುವರ್‍ಣ ಕರ್ನಾಟಕ ಭೂಷಣ ಪ್ರಶಸ್ತಿ,  ಬಸವ ಜ್ಯೋತಿ ರಾಜ್ಯ ಪ್ರಶಸ್ತಿ,  ಅಡ್ವೈಸರ್‍ ಸಾಹಿತ್ಯ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸಂದಿರುತ್ತದೆ. 

 

ಜರಗನಹಳ್ಳಿ ಶಿವಶಂಕರ್

(08 Sep 1949-05 May 2021)

ABOUT THE AUTHOR