About the Author

ಸಂಶೋಧಕಿ, ಕಾದಂಬರಿಗಾರ್ತಿ, ಕವಯತ್ರಿ ಜಯದೇವಿ ಗಾಯಕವಾಡ ಅವರು 1975 ಜುಲೈ 01 ರಂದು ಜನಿಸಿದರು. ಯಾಜ್ಞಸೇನಿಯ ಆತ್ಮಕಥನ ಅವರ ಮೊದಲ ಕಾದಂಬರಿ. ಅವರು ಬರೆದದ್ದು ಅಲ್ಪವಾದರು ಅತ್ಯತ್ತಮ ಕೃತಿಗಳನ್ನು ಕನ್ನಡ ಸಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ‘ಹೇಗೆ ಹೇಳಲಿ ನಾನು, ಮೂವತ್ತೊಂದು ಗಜಲ್‌ಗಳು’ ಅವರ ಕವನ ಸಂಕಲನ. ‘ಡಾ. ಅಬ್ದುಲ್‌ಕಲಾಂ, ರಾಣಿ ಚೆನ್ನಮ್ಮ, ಪ್ರೊ. ಬಾಲಚಂದ್ರ ಜಯಶೆಟ್ಟಿ’ ಮುಂತಾದವರ ಸ್ಪೂರ್ತಿದಾಯಕ ಜೀವನ ಬರಹಗಳನ್ನು ರಚಿಸಿದ್ದಾರೆ. ‘ಸಾಹಿತ್ಯ ಸಂಕ್ರಮಣ, ಜಾಗತೀಕರಣ ಮಹಿಳೆ ಸವಾಲುಗಳು’ ಅವರ ಪ್ರಮುಖ ವಿಮರ್ಶಾ ಕೃತಿಗಳು. ‘ಪ್ರಾಚೀನ ಬೌದ್ಧ ವಿದ್ಯಾಕೇಂದ್ರ ಸನ್ನತಿ, ಹೈದ್ರಾಬಾದ ಕರ್ನಾಟಕ ವಿಮೋಚನೆ ಮತ್ತು ಕನ್ನಡ ಸಾಹಿತ್ಯ’ ಅವರ ಸಂಶೋಧನಾ ಕೃತಿಗಳಾಗಿವೆ. ಅವರ ಸಾಹಿತ್ಯ ಸೇವೆಗೆ ಅಂತರರಾಷ್ಟ್ರೀಯ ಮಹಿಳಾ ಪ್ರಶಸ್ತಿ - ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ರುಕ್ಕಿಣಿಬಾಯಿ ಸ್ಮಾರಕ ಸಾಹಿತ್ಯ ಪ್ರಶಸ್ತಿ, ಸುವರ್ಣ ಕರ್ನಾಟಕ ರತ್ನ ಪ್ರಶಸ್ತಿ, ಶರಣ ಉರಿಲಿಂಗಪೆದ್ದಿ ಸಾಹಿತ್ಯ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ  ಹಾಗೂ ಶ್ರೀ ವಿಜಯ ಸಾಹಿತ್ಯ ಪ್ರಶಸ್ತಿ’ಗಳು ಲಭಿಸಿವೆ. 

 

ಜಯದೇವಿ ಗಾಯಕವಾಡ

(01 Jul 1975)