About the Author

ಸಂಗೀತಗಾರ್ತಿ, ಗಾಯಕಿ ಜಯದೇವಿ ಜಂಗಮಶೆಟ್ಟಿ ಅವರು ಮೂಲತಃ ರಾಯಚೂರಿನವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ‘ವಚನಗಳ ಗಾಯನ ಪರಂಪರೆ’ ವಿಷಯವಾಗಿ ಪಿಎಚ್ ಡಿ ಪದವೀಧರರು. ಸಂಗೀತದಲ್ಲಿ ವಿದ್ವತ್ ವಿಶಾರದ ಪದವೀಧರರು. ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರು. ಜೈಪುರ ಗ್ವಾಲಿಯರ ಘರಾನಾ ಗಾಯಕಿ. ಕನ್ನಡ ಚಲನಚಿತ್ರಗಳ ಮೊದಲ ಸಂಗೀತ ನಿರ್ದೇಶಕಿ ಎಂಬ ಖ್ಯಾತಿ ಇವರದ್ದು. ರಾಗ-ಭೈರವಿ (2019) ಎಂಬುದು ಇವರು ಸಂಗೀತ ನಿರ್ದೇಶಿಸಿದ ಕನ್ನಡ ಚಲನಚಿತ್ರ. ಡಾ. ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ, ಡಾ. ರಾಜಶೇಖರ ಮನ್ಸೂರ, ಜಯಶ್ರೀ ಪಟ್ನೆಗರ್ ಅವರ ಶಿಷ್ಯೆ. ಕಲಬುರಗಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಫೈನ್ ಆರ್ಟ್ಸ್-ಸಂಗೀತ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಆಗಿಯೂ ಕೆಲಸ ಮಾಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ (ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶನಾತ್ಮಕ ಕಲೆ) ಸಿಂಡಿಕೇಟ್ ಸದಸ್ಯರಾಗಿದ್ದರು. ಭಾರತದಾದ್ಯಂತ ಸಂಗೀತ ಗಾಯನ ಸಮಾರಂಭಗಳನ್ನು ನೀಡಿದ್ದಾರೆ.  

ಕೃತಿಗಳು:ವಚನ ಸಂಗೀತ ರತ್ನ ಪಂಡಿತ ಸಿದ್ಧರಾಮ ಜಂಬಲದಿನ್ನಿ, ಕೇಡಿಲ್ಲವಾಗಿ ಹಾಡುವೆ (ಪಿಎಚ್ ಡಿ ಮಹಾಪ್ರಬಂಧ), ಬಯಲ ನಾದವ ಹಿಡಿದು. 

ಪ್ರಶಸ್ತಿ-ಪುರಸ್ಕಾರಗಳು: ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಸಮ್ಮಾನ ಪ್ರಶಸ್ತಿ, ವಚನ ಗಾಯನಕ್ಕಾಗಿ ರಮಣಶ್ರೀ ಪ್ರಶಸ್ತಿ,  ಸರಕಾರದ ಬಾಲವಿಕಾಸ ಅಕಾಡೆಮಿಯಿಂದ ಕಲ್ಚರಲ್ ಗುರು ಪ್ರಶಸ್ತಿ, ರಾಜ್ಯಮಟ್ಟದ ಅಮ್ಮ ಪ್ರಶಸ್ತಿ, ಚೆನ್ನೈನ ಭಾರತ ರತ್ನ ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಗೌರವಾನ್ವಿತ ಪುರಸ್ಕಾರಗಳು ಲಭಿಸಿವೆ. 

ಜಯದೇವಿ ಜಂಗಮಶೆಟ್ಟಿ