ಬಯಲ ನಾದವ ಹಿಡಿದು

Author : ಜಯದೇವಿ ಜಂಗಮಶೆಟ್ಟಿ

Pages 138

₹ 150.00
Year of Publication: 2017
Published by: ಪಲ್ಲವ ಪ್ರಕಾಶನ
Address: # ಚನ್ನಪಟ್ಟಣ ಪೋಸ್ಟ್, ವಯಾ ಎಮ್ಮಿಗನೂರ್, ಬಳ್ಳಾರಿ- 583113.
Phone: 8880087235

Synopsys

ಖ್ಯಾತ ಹಿಂದೂಸ್ತಾನಿ ಗಾಯಕಿ ಡಾ. ಜಯದೇವಿ ಜಂಗಮಶೆಟ್ಟಿ ಅವರ ಕವಿತೆಗಳ ಸಂಕಲನ-ಬಯಲು ನಾದವ ಹಿಡಿದು. ವಚನಗಳು, ಅವುಗಳ ಆಶಯ, ಸಾಹಿತ್ಯ ಹಿರಿಮೆಗೆ ಮಾರು ಕವಯತ್ರಿ ಜಯದೇವಿ ಜಂಗಮಶೆಟ್ಟಿ ಅವರು ವಚನಗಳನ್ನು ಹಾಡುವ ಮೂಲಕ ಅವುಗಳ ಶ್ರೇಯಸ್ಸನ್ನು ಪಸರಿಸಲು ಶ್ರಮಿಸಿದ್ದರೆ, ವಚನಗಳ ದಟ್ಟ ಪ್ರಭಾವದೊಂದಿಗೆ ಕವಿತೆಗಳನ್ನೂ ರಚಿಸಿದ್ದು, ವಸ್ತು ವೈವಿಧ್ಯತೆ, ನಿರೂಪಣಾ ಶೈಲಿ, ಸಂದೇಶ, ವಿಶೇಷ ದೃಷ್ಟಿಕೋನದಿಂದ ಓದುಗರ ಗಮನ ಸೆಳೆಯುತ್ತವೆ.

About the Author

ಜಯದೇವಿ ಜಂಗಮಶೆಟ್ಟಿ

ಸಂಗೀತಗಾರ್ತಿ, ಗಾಯಕಿ ಜಯದೇವಿ ಜಂಗಮಶೆಟ್ಟಿ ಅವರು ಮೂಲತಃ ರಾಯಚೂರಿನವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ‘ವಚನಗಳ ಗಾಯನ ಪರಂಪರೆ’ ವಿಷಯವಾಗಿ ಪಿಎಚ್ ಡಿ ಪದವೀಧರರು. ಸಂಗೀತದಲ್ಲಿ ವಿದ್ವತ್ ವಿಶಾರದ ಪದವೀಧರರು. ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರು. ಜೈಪುರ ಗ್ವಾಲಿಯರ ಘರಾನಾ ಗಾಯಕಿ. ಕನ್ನಡ ಚಲನಚಿತ್ರಗಳ ಮೊದಲ ಸಂಗೀತ ನಿರ್ದೇಶಕಿ ಎಂಬ ಖ್ಯಾತಿ ಇವರದ್ದು. ರಾಗ-ಭೈರವಿ (2019) ಎಂಬುದು ಇವರು ಸಂಗೀತ ನಿರ್ದೇಶಿಸಿದ ಕನ್ನಡ ಚಲನಚಿತ್ರ. ಡಾ. ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ, ಡಾ. ರಾಜಶೇಖರ ಮನ್ಸೂರ, ಜಯಶ್ರೀ ಪಟ್ನೆಗರ್ ಅವರ ಶಿಷ್ಯೆ. ಕಲಬುರಗಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಫೈನ್ ಆರ್ಟ್ಸ್-ಸಂಗೀತ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಆಗಿಯೂ ಕೆಲಸ ...

READ MORE

Related Books