About the Author

ಸದಾ ಅಧ್ಯಯನ, ಅಧ್ಯಾಪನಗಳಲ್ಲಿ ತೊಡಗುವ ಮೂಲಕ ಸಾಹಿತ್ಯದ ವಿವಿಧ ಪ್ರಕಾರಗಳು ಸೇರಿದಂತೆ ಶರಣ ಸಾಹಿತ್ಯದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ ಜಯಶ್ರೀ ದಂಡೆಯವರು. 1958 ಮಾರ್ಚ್ 03 ಬಿಜಾಪುರದ ಮುದ್ದೇಬಿಹಾಳದಲ್ಲಿ ಜನಿಸಿದರು. ಡಾ. ಜಯಶ್ರೀ ದಂಡೆಯವರು  ವಚನಕಾರರ ಬದುಕು-ಬೋಧನೆಗಳ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಬದ್ದತೆಯ ಬರವಣಿಗೆ ಮಾಡಿದ್ದಾರೆ. ಅವರ 50 ಕ್ಕೂ ಹೆಚ್ಚು ಕೃತಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಶರಣ ಸಾಹಿತ್ಯಕ್ಕೆ ಸಂಬಂಧಿಸಿದವುಗಳಾಗಿವೆ ಎಂಬುದು ಗಮನಾರ್ಹ ಸಂಗತಿ. ’ವಚನಗಳಲ್ಲಿ ಶೈವ ಹಾಗೂ ವೀರಶೈವ’ (ಸಂಶೋಧನೆ), ’ಸ್ವಭಾವದ ವಚನಗಳು’ (ಕಾವ್ಯ), ”ವಚನಕಾರ್ತಿ ರಾಯಮ್ಮ, ಅಕ್ಕಮಹಾದೇವಿ, ಚೆನ್ನಬಸವಣ್ಣ, ಆಯ್ದಕ್ಕಿ ಲಕ್ಕಮ್ಮ, ಶಿಶುನಾಳ ಶರೀಫ ಸಾಹೇಬ, ಹಡಪದ ಲಿಂಗಮ್ಮ, ಚೆನ್ನಬಸವಣ್ಣ, ಗಣೇಶ ಮಸಣಯ್ಯ, ಮುಕ್ತಾಯಕ್ಕ, ಸಿದ್ದರಾಮ” (ಜೀವನ ಚರಿತ್ರೆ), “ಶರಣರ ಆರ್ಥಿಕ ಚಿಂತನೆ, ಶರಣ ಜೀವನ, ವಚನಗಳಲ್ಲಿ ಲಿಂಗವಂತ ಭಾಗ 1, ಭಾಗ 2, ಹೂವ ತಂದವರು” (ವಿಮರ್ಶೆ), ಫಲದೊಳಗಣ ರುಚಿ, ಬೆಡಗಿನ ವಚನಗಳ ಪಾರಿಭಾಷಾ ಕೋಶ, ಹಾಲತೊರೆ, ಶರಣ ತತ್ವ ಗಳು, ಬಸವನ ಬಾಗೇವಾಡಿ ಮಂಗಳವೇಡೆ” ಸಂಶೋಧನಾ ಕೃತಿಗಳು.

ಅವರಿಗೆ ಜೋಳದ ರಾಶಿ ದೊಡ್ಡನಗೌಡ ಪ್ರಶಸ್ತಿ, ಗುಲಬರ್ಗಾ ವಿ.ವಿ. ರಾಜ್ಯೋತ್ಸವ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಚಿತ್ತರಗಿ ಸಂಸ್ಥಾನಮಠದ ಗ್ರಂಥ ಪ್ರಶಸ್ತಿ, ಬಿ.ಎಂ.ಶ್ರೀ. ಪ್ರತಿಷ್ಠಾನದ ಎಚ್.ವಿ. ಸಾವಿತ್ರಮ್ಮ ಸಾಹಿತ್ಯ ಪ್ರಶಸ್ತಿ, ವಚನ ಸಾಹಿತ್ಯ ಶ್ರೀ, ಇಲಕಲ್ಲ ಮಠದ ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಸದಸ್ಯರು, ಅಖಿಲ ಭಾರತ ಶರಣಸಾಹಿತ್ಯ ಪರಿಷತ್ತು, ಮೈಸೂರು ಸದಸ್ಯರಾಗಿದ್ದರು.

ಜಯಶ್ರೀ ದಂಡೆ

(03 Mar 1958)

BY THE AUTHOR