About the Author

ಕೆ.ಜಿ. ಲಕ್ಷ್ಮಿನಾರಾಯಣಪ್ಪ (ಕೆ.ಗು..ಲ) ಅವರು ತುಮಕೂರು ಜಿಲ್ಲೆಯ ಕೋರ ಹೋಬಳಿಯ ಕೆಸ್ತೂರು ಗ್ರಾಮದಲ್ಲಿ 1950ರ ಆಗಸ್ಟ್ 3 ರಂದು ಜನಿಸಿದರು. ಎಂ.ಎಸ್ ಸಿ. ಹಾಗೂ ಡಿಬಿಎ ಪದವೀಧರರು. 1975ರಲ್ಲಿ ಅಬಕಾರಿ ಮತ್ತು ಸುಂಕ ಇಲಾಖೆಯ ಅಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿ 2010ರಲ್ಲಿ ನಿವೃತ್ತಿ ಹೊಂದಿದ್ದಾರೆ. 

ಕೆ.ಗು.ಲ. ಕಾವ್ಯನಾಮದಿಂದ ಸಾಹಿತ್ಯ ಕೃಷಿ ಗೈಯ್ಯುತ್ತಿದ್ದು, ತುಮಕೂರು ಜಿಲ್ಲೆಯ ಸಮಗ್ರ ದೇವಾಲಯಗಳ ಕುರಿತು ಸಂಪೂರ್ಣ ಮಾಹಿತಿ ನೀಡುವ ಕೃತಿ-‘ದೇವರಾಯನ ದುರ್ಗ ದಿವ್ಯ ದರ್ಶನ’ ರಚಿಸಿದ್ದಾರೆ. ರಾಜಕೀಯಾಗಸದ ಮಿನುಗುವ ನಕ್ಷತ್ರ-ಇವರ ಕವನ ಸಂಕಲನ. 

ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಶ್ರೀ ಮಾರ್ಕಾಂಡೇಯ ಮಹರ್ಷಿ ಗುರುಪೀಠ ಮಹಾಸಂಸ್ಥಾನದ ಧರ್ಮದರ್ಶಿ ಸೇರಿದಂತೆ ಜಿಲ್ಲೆಯ ಬಹುತೇಕ ದೇವಾಲಯಗಳ ಆಡಳಿತ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದು, ಎಎಸ್ ಆರ್. ಇನ್ ಫಿನಿಟಿ ಲಾ ಚೇಂಬರ್‍ಸ್ ಎಂಬ ಸಂಸ್ಥೆಯ ಮೂಲಕ ಜನಸಾಮಾನ್ಯರಿಗೆ ಕಾನೂನಿನ ಉಚಿತ ನೆರವು ನೀಡುತ್ತಿದ್ದಾರೆ. ನೇಕಾರವಾಣಿ ಪತ್ರಿಕೆ ವತಿಯಿಂದ ಇವರಿಗೆ ‘ನೇಕಾರ ರತ್ನ’  ಪ್ರಶಸ್ತಿ ಲಭಿಸಿದೆ. 

ಕೆ.ಜಿ. ಲಕ್ಷ್ಮಿನಾರಾಯಣಪ್ಪ (ಕೆ.ಗು.ಲ)

(03 Aug 1950)