ದೇವರಾಯನದುರ್ಗ ದಿವ್ಯದರ್ಶನ

Author : ಕೆ.ಜಿ. ಲಕ್ಷ್ಮಿನಾರಾಯಣಪ್ಪ (ಕೆ.ಗು.ಲ)

Pages 416

₹ 500.00




Year of Publication: 2018
Published by: ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಕಲ್ಯಾಣೋತ್ಸವ ಸಮಿತಿ
Address: #155, 4ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಚಾಮರಾಜಪೇಟೆ, ಬೆಂಗಳೂರು-560018
Phone: 9449994617

Synopsys

ತುಮಕೂರು ಜಿಲ್ಲಾ ದೇವಾಲಯಗಳ ಕುರಿತು ಸಮಗ್ರವಾಗಿ ಚಿತ್ರಣ ನೀಡಿದ ಕೃತಿ-ದೇವರಾಯನ ದುರ್ಗ ದಿವ್ಯದರ್ಶನ. ಕರ್ತೃ-ಕೆ.ಜಿ. ಲಕ್ಷ್ಮಿನಾರಾಯಣಪ್ಪ (ಕೆ.ಗು.ಲ). ಕೃತಿಯಲ್ಲಿ ದೇವರಾಯನ ದುರ್ಗ-ಲಕ್ಷ್ಮಿ ನರಸಿಂಹ ಸ್ವಾಮಿ ದಿವ್ಯಕ್ಷೇತ್ರ, ಶ್ರೀ ವಿದ್ಯಾಶಂಕರ ದೇವಾಲಯ, ಪುರಾಣ ಪ್ರಸಿದ್ಧ ಶೀಬಿ ನಾರಸಿಂಹ ಕ್ಷೇತ್ರ, ಸಿದ್ಧೌಷಧಿಗಳ ಶ್ರೀ ಕ್ಷೇತ್ರ ಸಿದ್ಧರ ಬೆಟ್ಟ, ಮಲ್ಲೇಶ್ವರ ದೇವಸ್ಥಾನ-ಮಧುಗಿರಿ, ಮಿಡಿಗೇಶಿ ದೇವಾಲಯಗಳು, ಶ್ರೀ ಕಾಮಾಕ್ಷಿ ಶಾರದಾಂಬಾ ದೇವಾಲಯ-ಹೆಬ್ಬೂರು, ತುರುವೇಕೆರೆ ದೇವಾಲಯಗಳು, ವಿಘ್ನಸಂತೆ ದೇವಾಲಯಗಳು, ಚನ್ನಕೇಶವ ದೇವಾಲಯ-ಅರಳಗುಪ್ಪೆ, ಕೆಸ್ತೂರಿನ ದೇವಾಲಯಗಳು ಹೀಗೆ ತುಮಕೂರು ಜಿಲ್ಲೆಯ ಸಮಗ್ರ ಐತಿಹಾಸಿಕ ದೇಗುಲಗಳ ಸಂಪೂರ್ಣ ಮಾಹಿತಿಯನ್ನು ಲೇಖಕರು ಕಟ್ಟಿಕೊಟ್ಟಿದ್ದಾರೆ.

About the Author

ಕೆ.ಜಿ. ಲಕ್ಷ್ಮಿನಾರಾಯಣಪ್ಪ (ಕೆ.ಗು.ಲ)
(03 August 1950)

ಕೆ.ಜಿ. ಲಕ್ಷ್ಮಿನಾರಾಯಣಪ್ಪ (ಕೆ.ಗು..ಲ) ಅವರು ತುಮಕೂರು ಜಿಲ್ಲೆಯ ಕೋರ ಹೋಬಳಿಯ ಕೆಸ್ತೂರು ಗ್ರಾಮದಲ್ಲಿ 1950ರ ಆಗಸ್ಟ್ 3 ರಂದು ಜನಿಸಿದರು. ಎಂ.ಎಸ್ ಸಿ. ಹಾಗೂ ಡಿಬಿಎ ಪದವೀಧರರು. 1975ರಲ್ಲಿ ಅಬಕಾರಿ ಮತ್ತು ಸುಂಕ ಇಲಾಖೆಯ ಅಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿ 2010ರಲ್ಲಿ ನಿವೃತ್ತಿ ಹೊಂದಿದ್ದಾರೆ.  ಕೆ.ಗು.ಲ. ಕಾವ್ಯನಾಮದಿಂದ ಸಾಹಿತ್ಯ ಕೃಷಿ ಗೈಯ್ಯುತ್ತಿದ್ದು, ತುಮಕೂರು ಜಿಲ್ಲೆಯ ಸಮಗ್ರ ದೇವಾಲಯಗಳ ಕುರಿತು ಸಂಪೂರ್ಣ ಮಾಹಿತಿ ನೀಡುವ ಕೃತಿ-‘ದೇವರಾಯನ ದುರ್ಗ ದಿವ್ಯ ದರ್ಶನ’ ರಚಿಸಿದ್ದಾರೆ. ರಾಜಕೀಯಾಗಸದ ಮಿನುಗುವ ನಕ್ಷತ್ರ-ಇವರ ಕವನ ಸಂಕಲನ.  ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಶ್ರೀ ಮಾರ್ಕಾಂಡೇಯ ಮಹರ್ಷಿ ಗುರುಪೀಠ ...

READ MORE

Related Books