About the Author

ಪ್ರೊ. ಕೆ.ಎಂ. ಲೋಕೇಶ್  ಮಂಗಳೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಾಪಕರು, 
2002-03ರಲ್ಲಿ ಕಾಮನ್ ವೆಲ್ತ್ ಪೋಸ್ಟ್-ಡೊಕ್ಟೊರಲ್ ಫೆಲೋಶಿಪ್ ಪಡೆದಿದ್ದ ಇವರದ್ದು ಆಧುನಿಕ ಕರ್ನಾಟಕ ಮತ್ತು ಆಧುನಿಕ ಭಾರತದ ಇತಿಹಾಸ ವಿಶೇಷ ಆಸಕ್ತಿಯ ಕ್ಷೇತ್ರಗಳು. ಕೊಡಗು ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದ ಬಗ್ಗೆ ಇವರ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರಕಟಿತವಾಗಿರುವ ಅನೇಕ ಪ್ರಬಂಧಗಳು ಮತ್ತು ಲೇಖನಗಳು ವಿಶೇಷವಾಗಿ ಗಮನ ಸೆಳೆದಿವೆ.
`ಭಾರತದ ಜನ ಇತಿಹಾಸ’ ಪುಸ್ತಕ ಮಾಲಿಕೆಯಲ್ಲಿ ಚಿಂತನ ಪುಸ್ತಕ ಪ್ರಕಟಿಸಿರುವ 7 ಪುಸ್ತಕಗಳಲ್ಲಿ 2 ಪುಸ್ತಕಗಳ ಅನುವಾದ ಇವರದ್ದು. ಈ ಮೊದಲು ಪ್ರಕಟವಾಗಿದ್ದ  ಇವರ ಅನುವಾದಿಸಿದ ಭಾರತದ ಜನ ಇತಿಹಾಸ ಸರಣಿ-28 `ಭಾರತದ ಆರ್ಥಿಕತೆ 1858-1914’ ಪುಸ್ತಕ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವರ್ಷದ ಕನ್ನಡದ ಅತ್ಯುತ್ತಮ ಅನುವಾದ ಪ್ರಶಸ್ತಿ ಪಡೆದಿದೆ. ಭಾರತದ ಆರ್ಥಿಕತೆ ಬ್ರಿಟಿಷ್ ಆಳ್ವಿಕೆಯ ಪ್ರಾರಂಭಿಕ ಹಂತದಲ್ಲಿ-1757-1857ರವರೆಡಗೆ -ಈ ಇರ್ಫಾನ್ ಹಬೀಬ್ ಅವರ ಇಂಗ್ಲಿಷ್ ಕೃತಿಯ ಕನ್ನಡಾನುವಾದ. 
 

ಕೆ. ಎಂ. ಲೋಕೇಶ್