About the Author

ಹಿರಿಯ ಲೇಖಕರದ ಕೆ.ಎಂ. ರಾಘವ ನಂಬಿಯಾರ್‌ ಅವರು ಕೇರಳದ ಕಣ್ಣಾನೂರಿನ ರಾಮಂತಳಿಯಲ್ಲಿ 1946 ಡಿಸೆಂಬರ್‌ 7ರಂದು ಜನಿಸಿದರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಸಂಸ್ಕೃತ ಪದವಿ ಪಡೆದ ಇವರು ‘ಕರಾವಳಿಯ ಯಕ್ಷಗಾನದ ಹಿಮ್ಮೇಳ: ಒಮದು ಸಮಗ್ರ ಅಧ್ಯಯನ’ ಪ್ರಬಂಧ ಮಂಡಿಸಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದರು. ಉದಯವಾಣಿ ದಿನಪತ್ರಿಕೆಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 

ಮದ್ದಳೆಯ ಮಾಯಾಲೋಕ, ವಿಲೋಕನ, ತಿಳಿನೋಟ, ದೀವಟಿಗೆ, ಚಿನ್ನದ ತಾಳ, ಹಿಮ್ಮೇಳ, ಮುಂದಲೆ, ಯಾಜಿ ಭಾಗವತರು, ಯಕ್ಷ ಸೇಚನ ಮುಂತಾದವು ಇವರ ಪ್ರಮುಖ ಕೃತಿಗಳು. ಇವರಿಗೆ ಕೆರೆಮನೆ ಶಂಭು ಹೆಗಡೆ ಪ್ರಶಸ್ತಿ, ವಿಶುಕುಮಾರ್‌ ಪ್ರಶಸ್ತಿ, ಜೀಶಂಪ ಪ್ರಶಸ್ತಿ, ಸದಾನಮದ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. 

ಕೆ.ಎಂ. ರಾಘವ ನಂಬಿಯಾರ್‌

(07 Dec 1946)