About the Author

ಹೆಗ್ಗೋಡಿನ 'ನೀನಾಸಂ ರಂಗ ಶಿಕ್ಷಣ ಕೇಂದ್ರ'ದಲ್ಲಿ ಅಧ್ಯಾಪಕಿ'ಯಾಗಿದ್ದ ಕೆ.ಎಸ್‌. ಪೂರ್ಣಿಮಾ ಅವರು ಸಾಗರದ ಲಾಲ್ ಬಹದೂರ್ ಕಾಲೇಜಿನ ಇಂಗ್ಲಿಷ್‌ ಪ್ರೊಫೆಸರ್ ಆಗಿ‌ದ್ದರು. ಜರ್ಮನ್ ರಂಗ ನಿರ್ದೇಶಕ ಫ್ರಿಟ್ಸ್ ಬೆನಟ್ಟ್ ರ ಸಹಾಯಕಿಯಾಗಿ ಕೆಲಸ ಮಾಡಿದ ಪೂರ್ಣಿಮಾ ಅವರು ವಿಮರ್ಶಕ ಟಿ.ಪಿ. ಅಶೋಕ ಅವರ ಪತ್ನಿ.  ಪೂರ್ಣಿಮಾ ಅವರು ಬಹುಮುಖ ಪ್ರತಿಭೆಯ ಉತ್ಸಾಹಿ ಮಹಿಳೆ. ಬೋಧನೆ, ರಂಗ ನಿರ್ದೇಶನ ,ಕಾವ್ಯ ರಚನೆ, ವಿಮರ್ಶೆಗಳಲ್ಲಿ ತೊಡಗಿಸಿಕೊಂಡಿದ್ದರು.  ಕ್ಯಾನ್ಸರ್ ಕಾಯಿಲೆಯಿಂದ ಬಳಲಿದ ಅವರು 2010 ರ ಜುಲೈ 24 ರಂದು ನಿಧನರಾದರು.

ಕೆ.ಎಸ್. ಪೂರ್ಣಿಮಾ