ಕಾಲದಲೆಯ ಮೇಲೆ

Author : ಕೆ.ಎಸ್. ಪೂರ್ಣಿಮಾ

Pages 76

₹ 60.00




Year of Publication: 2012
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಕವಿತೆಯಂತೆಯೇ ಇದ್ದವಳು, ನಿತ್ಯ ಜೊತೆಗಿಲ್ಲದಿದ್ದರೂ ಜೊತೆಗೇ ಇದ್ದವಳು, ‘ನಮ್ಮ ಪ್ರೀತಿಯ ಪೂರ್ಣಿಮಾ’ ಅವಳು. ಕವಿತೆಗಳನ್ನು ಬರೆದೂ ಬರೆಯದವಳಂತೆ ಪ್ರಕಟಮಾಡದೆ ಹಾಯಾಗಿ ಇದ್ದಳಲ್ಲ, ಆ ಶಕ್ತಿ ಅಂಥ ಅವಳಿಗೆ ಮಾತ್ರ. ಆದರೂ ತರವಲ್ಲವಿದು ನಿನಗೆ ಪೂರ್ಣಿಮಾ, ಪ್ರಕಟಿಸಬೇಕಿತ್ತು ಅಂತಂದರೆ ನಕ್ಕು ಮಾತು ತೇಲಿಸಿ ಮರೆಸುವ ಅವಳ ನಗೆಬಗೆ ಕಣ್ಣಿಗೆ ಕಟ್ಟುತ್ತಿದೆ. ಕಣ್ಣೆದುರಿನ ಚಿತ್ರವಾದಳು ಎಂತು ಬಂಗಾರ ಹುಡುಗಿ, ಇಷ್ಟು ಬೇಗ. ಸತ್ಯ ಮತ್ತು ನಿಜ ಕಾಲದಲೆಗಳು ನಂಬುವ ಮತ್ತು ನುಂಗುವ ಕಷ್ಟಗಳೊಡನೆ ಬಿಟ್ಟುಹೋದ ಈ ಕವನಗಳು ಉದ್ದಕ್ಕೂ ಸ್ಪರ್ಶಿಸುವ ಸಾವಧಾನದ ಹಸುಕು ಬಿಸಿನುಡಿ, ಒಳಮಾತು, ಕಾಣದಂತೆ ಆದರೆ ತಿಳಿಯುವಂತೆ ಹೊಳೆವ ಕಣ್ ತೇವ... ಓದುತ್ತ ಹೋದಂತೆ ನಿಶ್ಶಬ್ದಗೊಳಿಸುತ್ತವೆ.

About the Author

ಕೆ.ಎಸ್. ಪೂರ್ಣಿಮಾ - 24 July 2012)

ಹೆಗ್ಗೋಡಿನ 'ನೀನಾಸಂ ರಂಗ ಶಿಕ್ಷಣ ಕೇಂದ್ರ'ದಲ್ಲಿ ಅಧ್ಯಾಪಕಿ'ಯಾಗಿದ್ದ ಕೆ.ಎಸ್‌. ಪೂರ್ಣಿಮಾ ಅವರು ಸಾಗರದ ಲಾಲ್ ಬಹದೂರ್ ಕಾಲೇಜಿನ ಇಂಗ್ಲಿಷ್‌ ಪ್ರೊಫೆಸರ್ ಆಗಿ‌ದ್ದರು. ಜರ್ಮನ್ ರಂಗ ನಿರ್ದೇಶಕ ಫ್ರಿಟ್ಸ್ ಬೆನಟ್ಟ್ ರ ಸಹಾಯಕಿಯಾಗಿ ಕೆಲಸ ಮಾಡಿದ ಪೂರ್ಣಿಮಾ ಅವರು ವಿಮರ್ಶಕ ಟಿ.ಪಿ. ಅಶೋಕ ಅವರ ಪತ್ನಿ.  ಪೂರ್ಣಿಮಾ ಅವರು ಬಹುಮುಖ ಪ್ರತಿಭೆಯ ಉತ್ಸಾಹಿ ಮಹಿಳೆ. ಬೋಧನೆ, ರಂಗ ನಿರ್ದೇಶನ ,ಕಾವ್ಯ ರಚನೆ, ವಿಮರ್ಶೆಗಳಲ್ಲಿ ತೊಡಗಿಸಿಕೊಂಡಿದ್ದರು.  ಕ್ಯಾನ್ಸರ್ ಕಾಯಿಲೆಯಿಂದ ಬಳಲಿದ ಅವರು 2010 ರ ಜುಲೈ 24 ರಂದು ನಿಧನರಾದರು. ...

READ MORE

Related Books