About the Author

ಕೆ. ತಿಮ್ಮಯ್ಯ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಚಿಕ್ಕಬಾಣಗೆರೆಯ ಮೇಗಳಹಟ್ಟಿಯವರು . ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಕನ್ನಡ ಎಂ.ಎ ಪದವಿಯನ್ನು ಪಡೆದ ಅವರು SET ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು.ನಂತರ ‘ಶಿರಾ ತಾಲ್ಲೂಕಿನ ಗ್ರಾಮದೇವತೆಗಳು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಮೈಸೂರು ವಿಶ್ವವಿದ್ಯಾನಿಲಯದಿಂದ 2004 ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ವೃತ್ತಿ ಬದುಕಿನ ಜೊತೆಗೆ ಪ್ರವೃತ್ತಿಯಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ ಇವರು ಇದುವರೆಗೆ ಇಪ್ಪತೈದಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಹಲವಾರು ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ವಿಚಾರ ಸಂಕಿರಣ, ಕಾರ್ಯಗಾರಗಳಲ್ಲಿ ಸಂಶೋಧನಾ ಪತ್ರಿಕೆಗಳನ್ನು ಮಂಡಿಸಿದ್ದಾರೆ. ಅಧ್ಯಕ್ಷತೆ ವಹಿಸಿದ್ದಾರೆ. ಹಲವು ಅರಿವು-ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಹಲವು ಬಾರಿ ಮೈಸೂರಿನ ವಿಶ್ವವಿಖ್ಯಾತ ದಸರಾ ಕವಿಗೋಷ್ಠಿ ಉಪಸಮಿತಿಯ ಸದಸ್ಯರಾಗಿ, ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕೃತಿಗಳು : ನೊಸರಿ (ಜಾನಪದ), ಚಿಕ್ಕಬಾಣಗೆರೆ ಕರಿಯಮ್ಮ (ಜಾನಪದ) ಉಲಾಯ (ಜಾನಪದ) , ಕೊನರು (ವಿಮರ್ಶೆ) , ಜೀವ ಸಂಕುಲ ಜಾನಪದ (ಜಾನಪದ) ,ಕವಣೆ (ಜಾನಪದ), ಬೆಳಸು (ವಿಮರ್ಶೆ) , ಉಗಾದಿ (ಕಥಾ ಸಂಕಲನ), ಅರಿವಿನ ಬೆರಗು (ವಿಮರ್ಶೆ) ,ಸಾಲುಹುಣಿಸೆ (ಕಥಾ ಸಂಕಲನ) , ಕಾಡುಗೊಲ್ಲ ಕುಲಭೂಷಣ ಬಿ.ಚಿಕ್ಕಪ್ಪಯ್ಯ (ಜೀವನ ಚರಿತ್ರೆ) , ಕಾಯಕರತ್ನ (ಜೀವನ ಚರಿತ್ರೆ) , ಕಾಡು ಕುಸುಮ (ಜಾನಪದ) ,ಹೃದಯ ಸ್ಪಂದನ (ವಿಮರ್ಶೆ), ಬಯಲ ಆಲಯ ,ಹರಿಗೋಲು (ಸಂ) ,ಹೂವಿನಿಂದ ನಾರು (ಸಂ), ಹೊಸಗನ್ನಡ ಸಾಹಿತ್ಯ ಸಂಪುಟ ,ನಡುಗನ್ನಡ ಸಾಹಿತ್ಯ ಸಂಪುಟ ಕನ್ನಡ ಸಾಹಿತ್ಯ ಪರಿಚಯ , ಸಮದರ್ಶಿ (ವಿಮರ್ಶೆ) , ಅನಂತ ಯಾತ್ರಿ (ಸಂ) , ಕೃಷ್ಣಾರ್ಜುನ (ಸಂ) ವ್ಯಾಕರಣ ಸಂಗಾತಿ, ಕಾಡುಗೊಲ್ಲ ಕೈಫಿಯತ್ತುಗಳು, ಸಾಲಾವಳಿ .

ಕೆ. ತಿಮ್ಮಯ್ಯ