About the Author

ಕತೆಗಾರ-ಕಾದಂಬರಿಕಾರ ಕಾ.ತ. ಚಿಕ್ಕಣ್ಣ ಅವರು ಮೂಲತಃ ಮೈಸೂರು ಜಿಲ್ಲೆಯ ಕಾಳಮ್ಮನವರ ಕೊಪ್ಪಲು ಗ್ರಾಮದವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾಗಿ ನಿವೃತ್ತರಾಗಿರುವ ಚಿಕ್ಕಣ್ಣ ಅವರು ಸಂತಕವಿ ರಾಷ್ಟ್ರೀಯ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯ ಸಂಚಾಲಕರು. ನಾಲ್ಕು ಕಥಾಸಂಕಲನ, ಮೂರು ಕಾದಂಬರಿ ರಚಿಸಿದ್ದಾರೆ,

’ಮುಂಜಾವು’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ. ಅವರ ’ವಧೂಟಿ’ ನಾಟಕಕ್ಕೆ ಆರ್ಯಭಟ ಪ್ರಶಸ್ತಿ ಲಭಿಸಿದೆ.  ಹಲವು ಸಮಿತಿಗಳ ಸದಸ್ಯ ಕಾರ್ಯದರ್ಶಿ, ಸಂಚಾಲಕರಾಗಿ ಕಾರ್ಯನಿರ್ವಹಿಸಿರುವ ಅವರು ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು.  ಬಿಳಲು ಬಿಟ್ಟ ಬದುಕು, ಒಡಲುರಿ, ವಾಸನಾಮಯ ಬದುಕಿನ ಆಚೆ ಈಚೆ, ಮನಸ್ಸು ಮುಗಿಲು, ಮುಂಜಾವು, ಬಳ್ಳಿಸಾಲು, ಮಳೆ ಬಯಲು ಅವರ ಸೃಜನಶೀಲ ಕೃತಿಗಳು. ಚಿಕ್ಕಣ್ಣ ಅವರು ಕನಕ ಕಿರಣ, ಪ್ರೈಸ್‌ಲೆಸ್‌ ಗೋಲ್ಡ್‌, ಭಾರತೀಪ್ರಿಯ, ಕನಕಭಾರತೀ, ಮುತ್ತು ಬಂದಿದೆ ಕೇರಿಗೆ ಕೃತಿಗಳನ್ನು ಸಂಪಾದಿಸಿದ್ದಾರೆ.

ಕಾ.ತ.ಚಿಕ್ಕಣ್ಣ

(30 May 1952)

BY THE AUTHOR