ಮಾಗಿ ಕೋಗಿಲೆ ಮೌನ

Author : ಕಾ.ತ.ಚಿಕ್ಕಣ್ಣ

Pages 96

₹ 100.00
Year of Publication: 2021
Published by: ಪಲ್ಲವ ಪ್ರಕಾಶನ
Address: ಚೆನ್ನಪಟ್ಟಣ ಪೋಸ್ಟ್ ಎಮ್ಮಿಗನೂರು, ಬಳ್ಳಾರಿ, 583113
Phone: 8880087235

Synopsys

ಲೇಖಕ ಕಾ.ತ.ಚಿಕ್ಕಣ್ಣ ಅವರ ಕತಾ ಸಂಕಲನ ಮಾಗಿಯ ಕೋಗಿಲೆ ಮೌನ. ಚನ್ನಪ್ಪ ಕಟ್ಟಿ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ‘ಮಾಗಿ ಕೋಗಿಲೆ ಮೌನ’ ಹೆಸರಿನ ಕತೆ ಈ ಸಂಕಲನದಲ್ಲಿ ಇಲ್ಲ. ಇಲ್ಲಿನ ಕತೆಗಳ ಉಗಮಕ್ಕೆ ಕಾರಣವಾದ ಸೃಜನಶೀಲ ಲೇಖಕನ ಮನೋಸ್ಥಿತಿಗೆ ರೂಪಕವೆನ್ನುವಂತೆ ಈ ಶೀರ್ಷಿಕೆಯನ್ನು ಬಳಸಲಾಗಿದೆ ಅನ್ನಿಸುತ್ತದೆ. ಕೋಗಿಲೆಯ ದೀರ್ಘಕಾಲದ ಮೌನ ಹಾಗೂ ವಸಂತ ಋತುವಿನ ಆಗಮನದೊಂದಿಗೆ ಚಿಗುರೊಡೆಯುವ ಅದರ ಮಧುರಗಾನ ಲೇಖಕನ ಸೃಜನಶಕ್ತಿಯ ಲುಪ್ತತೆ ಹಾಗೂ ಧಾರಣೆಯನ್ನು ಸಂಕೇತಿಸುತ್ತವೆ. ಇದರ ಜೊತೆಗೆ ಕೋಗಿಲೆಯ ಹೃದಯಭೇದಕ ಆರ್ತನಾದವನ್ನು ‘ತನ್ನ ಚಿಕ್ಕಮ್ಮನನನ್ನು ಕೊಂದ ಕೋಗಿಲೆಯ ಪಶ್ಚಾತ್ತಾಪ’ದ ಸಂಕೇತವೆಂದು ಪರಿಭಾವಿಸುವ ಜನಪದರ ನಂಬಿಕೆಯೂ ಬೆರೆತು ಸಣ್ಣ ಕತೆಗಳನ್ನು ರಚಿಸುವವನ ಒಟ್ಟು ಮನೋಭೂಮಿಕೆಯನ್ನು ಈ ರೂಪಕ ಅಡಕಗೊಳಿಸಿಕೊಂಡಿದೆ. ಇಲ್ಲಿನ ಬಹುಪಾಲು ಕತೆಗಳಲ್ಲಿ ಕಾಣಿಸಿಕೊಳ್ಳುವ ಪಾತ್ರಗಳು ಬದುಕಿನ ಬಲಿಪಶುಗಳು ಮತ್ತು ಮುಳುಗಿಹೋಗುತ್ತಿರುವವರು ಎಂಬುದಾಗಿ ಹೇಳಿದ್ದಾರೆ.

About the Author

ಕಾ.ತ.ಚಿಕ್ಕಣ್ಣ
(30 May 1952)

ಕತೆಗಾರ-ಕಾದಂಬರಿಕಾರ ಕಾ.ತ. ಚಿಕ್ಕಣ್ಣ ಅವರು ಮೂಲತಃ ಮೈಸೂರು ಜಿಲ್ಲೆಯ ಕಾಳಮ್ಮನವರ ಕೊಪ್ಪಲು ಗ್ರಾಮದವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾಗಿ ನಿವೃತ್ತರಾಗಿರುವ ಚಿಕ್ಕಣ್ಣ ಅವರು ಸಂತಕವಿ ರಾಷ್ಟ್ರೀಯ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯ ಸಂಚಾಲಕರು. ನಾಲ್ಕು ಕಥಾಸಂಕಲನ, ಮೂರು ಕಾದಂಬರಿ ರಚಿಸಿದ್ದಾರೆ, ’ಮುಂಜಾವು’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ. ಅವರ ’ವಧೂಟಿ’ ನಾಟಕಕ್ಕೆ ಆರ್ಯಭಟ ಪ್ರಶಸ್ತಿ ಲಭಿಸಿದೆ.  ಹಲವು ಸಮಿತಿಗಳ ಸದಸ್ಯ ಕಾರ್ಯದರ್ಶಿ, ಸಂಚಾಲಕರಾಗಿ ಕಾರ್ಯನಿರ್ವಹಿಸಿರುವ ಅವರು ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು.  ಬಿಳಲು ಬಿಟ್ಟ ಬದುಕು, ಒಡಲುರಿ, ವಾಸನಾಮಯ ಬದುಕಿನ ಆಚೆ ಈಚೆ, ಮನಸ್ಸು ...

READ MORE

Related Books