About the Author

ಕಡಿದಾಳ್‌ ಪ್ರಕಾಶ್‌ ಅವರು ತೀರ್ಥಹಳ್ಳಿ ತಾಲೂಕಿನ ಕಡದಾಳಿನವರು. 25.05.1953ರಂದು ಜನಿಸಿದ ಇವರ ತಾಯಿ ನಾಗವೇಣಮ್ಮ ಹಾಗೂ ತಂದೆ ಕೆ. ಎಸ್.‌ ರಾಮಪ್ಪಗೌಡರ. ಹುಟ್ಟೂರು ಕಡಿದಾಳಿನಲ್ಲಿ ಪಾಥಮಿಕ, ಮೈಸೂರಿನಲ್ಲಿ ಮಾಧ್ಯಮಿಕ ಮತ್ತು ತೀರ್ಥಹಳ್ಳಿಯಲ್ಲಿ ಪ್ರೌಢ ಶಿಕ್ಷಣದ ಪಡೆದ ಬಳಿಕ ಶಿವಮೊಗ್ಗದ ಡಿವಿಎಸ್‌ ಈಜಿನಲ್ಲಿ ಪದವಿಯನ್ನೂ ಪಡೆದಿರುತ್ತಾರೆ. ವಿದ್ಯಾರ್ಥಿ ದಿಸೆಯಲ್ಲಿ ವಿ.ವಿ.ಯ ಬಾಲ್‌ ಬ್ಯಾಡ್ಮಿಂಟನ್ ತಂಡದ ನಾಯಕನಾಗಿ, ನಂತರ ಸಾಕಷ್ಟು ಕ್ರೀಡಾಕೂಟ ನಡೆಸಿದ ಅನುಭವವೂ ಇವರಲ್ಲಿದೆ.

ಕುವೆಂಪು ಅವರೊಂದಿಗೆ ನಿಕಟ ಒಡನಾಟವಿದ್ದ ಹಾಗೂ ಕಡಿದಾಳ್‌ ಪರಿವಾರದಿಂದ ಬಂದ ಇವರಿಗೆ ಚಿಕ್ಕಂದಿನಿಂದಲೇ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ. ಪುಸ್ತಕ ಪ್ರಕಟಣೆಯಲ್ಲಿ ಯಾವಾಗಲೂ ಹೊಸತನವನ್ನು ಪ್ರದರ್ಶಿಸುತ್ತಾ ಬಂದಿರುವ ಇವರ ಪರಿಕಲ್ಪನೆಯಲ್ಲಿ ಕುವೆಂಪು ಸಮಗ್ರ ಸಾಹಿತ್ಯದ ಹನ್ನೊಂದು ಸಂಪುಟಗಳು, ಕುವೆಂಪು ಚಿತ್ರ ಸಂಪುಟ, ಕುವೆಂಪು ಮಲೆನಾಡು, ಶ್ರೀ ರಾಮಾಯಣ ದರ್ಶನಂ ಮುಂತಾದ ಬಹುಕೃತಿಗಳು ಮೈದಳೆದಿವೆ. ಅವುಗಳಲ್ಲಿ ಕುವೆಂಪು ಚಿತ್ರ ಸಂಪುಟ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ʼಪುಸ್ತಕ ಸೊಬಗುʼ ಬಹುಮಾನ ಸಿಕ್ಕಿದೆ. ಇನ್ನು, ಇವರ ಬಹುಮುಖೀ ಸೇವೆಯನ್ನು ಗುರುತಿಸಿ ಮೈಸೂರಿನ ಕುವೆಂಪು ವಿದ್ಯಾರ್ಧಕ ಟ್ರಸ್ಟ್ 2016ರಲ್ಲಿ ʼವಿಶ್ವಮಾನವ ಪ್ರಶಸ್ತಿʼ ನೀಡಿ ಗೌರವಿಸಲಾಗಿದೆ.

ಕೃತಿ: ಕಟ್ಟುವ ಹಾದಿಯಲ್ಲಿ... ಕುವೆಂಪು ಪ್ರತಿಷ್ಠಾನ: ಉಗಮ-ವಿಕಾಸ

ಕಡಿದಾಳ್‌ ಪ್ರಕಾಶ್

(25 May 1953)