ಕಟ್ಟುವ ಹಾದಿಯಲ್ಲಿ

Author : ಕಡಿದಾಳ್‌ ಪ್ರಕಾಶ್

Pages 288

₹ 500.00




Year of Publication: 2022
Published by: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ.), ಕುಪ್ಪಳಿ
Address: ದೇವಾಂಗಿ ಅಂಚೆ, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ, ಕರ್ನಾಟಕ- 577 415
Phone: 9019063692

Synopsys

ಲೇಖಕ ಕಡಿದಾಳ್‌ ಪ್ರಕಾಶ ಅವರ ಮೊದಲ ಕೃತಿ ʼಕಟ್ಟುವ ಹಾದಿಯಲ್ಲಿ..ಪುಸ್ತಕದ ಬಗ್ಗೆ ಲೇಖಕರೇ ಹೇಳುವಂತೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವು ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲೇ ಒಂದು ಮದರಿ ಪ್ರತಿಷ್ಠಾನವಾಗಿದೆ. ಅದರ ಚಟುವಟಿಕೆಗಳು, ಹುಟ್ಟು- ಬೆಳವಣಿಗೆ ಎಲ್ಲದರ ಬಗ್ಗೆಯೂ ಅಧಿಕೃತವಾಗಿ ಇದರಲ್ಲಿ ಹೇಳಲಾಗಿದೆ.

ಪುಸ್ತಕಕ್ಕೆ ಮುನ್ನುಡಿ ಬರೆದ ʼರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನʼ ದ ಅಧ್ಯಕ್ಷ ಹಂಪ ನಾಗರಾಜಯ್ಯ ಅವರು, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸ ಲಾರರು, ಈ ತಲೆಮಾರಿನವರಿಗೇ ಇಲ್ಲಿ ನಮೂದಿಸಿರುವ ಅನೇಕ ವಿವರಗಳು ತಿಳಿಯದಿರುವಾಗ ಇನ್ನು ಮುಂದಿನ ಜನಾಂಗಕ್ಕೆ ಹೇಗೆ ತಿಳಿಯಬೇಕು. ಅದರಿಂದ ಈ ಪುಸ್ತಕಕ್ಕೆ ಇರುವ ಚಾರಿತ್ರಿಕ ಮಹತ್ವವನ್ನು ಉತ್ತೇಕ್ಷಿಸಬೇಕಾದ ಅಗತ್ಯವಿಲ್ಲ. ಈ ಪುಸ್ತಕದಲ್ಲಿ ಒಟ್ಟು 28 ಅಧ್ಯಾಯಗಳಿದ್ದು ಸೂಕ್ತ ಶೀರ್ಷಿಕೆ ಹೊಂದಿವೆ. ಪ್ರತಿಯೊಂದು ಅಧ್ಯಾಯಕ್ಕೂ ಅಲ್ಲಲ್ಲಿಗೆ ಸಮುಚಿತವಾಗಿ ಒಪ್ಪುವ ಕುವೆಂಪುರವರ ಕವಿತೆಯ ಸಾಲುಗಳ ಹೂ ಮುಡಿಸಿದ್ದಾರೆ. ಇದುವರೆಗೆ ಪ್ರತಿಷ್ಠಾನ ನಡೆದು ಬಂದ ದಾರಿಯ ಸಿಂಹಾವಲೋಕನ ಮಾಡಿಸುವ ಕೈಪಿಡಿಯಿದು. ಇಡೀ ಪುಸ್ತಕವನ್ನು ಓದಿದಮೇಲೆ ಪ್ರತಿಷ್ಠಾನವನ್ನು ಪ್ರದಕ್ಷಿಣೆ ಮಾಡಿದ ಅನುಭವ ಆಗುತ್ತದೆ. ಜೊತೆಗೆ ಕುವೆಂಪುರವರ ಜೀವನಯಾನದ ಸ್ಕೂಲ ಪರಿಚಯವೂ ಸಿಗುತ್ತದೆ. ಗ್ರಂಥದ ಉದ್ದಕ್ಕೂ ಅಲ್ಲಲ್ಲಿ ಸಮಂಜಸವಾದ ಚಿತ್ರಗಳಿರುವುದು ವಿವರಣೆಗೆ ಬೆಳಕು ಹಾಯಿಸಿ ಜೀವತುಂಬಿವೆ. ಪ್ರತಿಷ್ಠಾನದ ಹುಟ್ಟು ಮತ್ತು ಬೆಳವಣಿಗೆ ಕುರಿತು ಸರಿಯಾದ ಕ್ರಮಬದ್ಧ ದಾಖಲೆಯೊಂದರ ಅಗತ್ಯ ಇತ್ತು. ಪ್ರಕಾಶರು ಆ ಕೆಲಸವನ್ನು ಸಮರ್ಥವಾಗಿ ಪೂರೈಸಿದ್ದಾರೆ ಎಂದು ಹೇಳಿದ್ದಾರೆ.

About the Author

ಕಡಿದಾಳ್‌ ಪ್ರಕಾಶ್
(25 May 1953)

ಕಡಿದಾಳ್‌ ಪ್ರಕಾಶ್‌ ಅವರು ತೀರ್ಥಹಳ್ಳಿ ತಾಲೂಕಿನ ಕಡದಾಳಿನವರು. 25.05.1953ರಂದು ಜನಿಸಿದ ಇವರ ತಾಯಿ ನಾಗವೇಣಮ್ಮ ಹಾಗೂ ತಂದೆ ಕೆ. ಎಸ್.‌ ರಾಮಪ್ಪಗೌಡರ. ಹುಟ್ಟೂರು ಕಡಿದಾಳಿನಲ್ಲಿ ಪಾಥಮಿಕ, ಮೈಸೂರಿನಲ್ಲಿ ಮಾಧ್ಯಮಿಕ ಮತ್ತು ತೀರ್ಥಹಳ್ಳಿಯಲ್ಲಿ ಪ್ರೌಢ ಶಿಕ್ಷಣದ ಪಡೆದ ಬಳಿಕ ಶಿವಮೊಗ್ಗದ ಡಿವಿಎಸ್‌ ಈಜಿನಲ್ಲಿ ಪದವಿಯನ್ನೂ ಪಡೆದಿರುತ್ತಾರೆ. ವಿದ್ಯಾರ್ಥಿ ದಿಸೆಯಲ್ಲಿ ವಿ.ವಿ.ಯ ಬಾಲ್‌ ಬ್ಯಾಡ್ಮಿಂಟನ್ ತಂಡದ ನಾಯಕನಾಗಿ, ನಂತರ ಸಾಕಷ್ಟು ಕ್ರೀಡಾಕೂಟ ನಡೆಸಿದ ಅನುಭವವೂ ಇವರಲ್ಲಿದೆ. ಕುವೆಂಪು ಅವರೊಂದಿಗೆ ನಿಕಟ ಒಡನಾಟವಿದ್ದ ಹಾಗೂ ಕಡಿದಾಳ್‌ ಪರಿವಾರದಿಂದ ಬಂದ ಇವರಿಗೆ ಚಿಕ್ಕಂದಿನಿಂದಲೇ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ. ಪುಸ್ತಕ ಪ್ರಕಟಣೆಯಲ್ಲಿ ಯಾವಾಗಲೂ ...

READ MORE

Related Books