About the Author

ಹೊಸಗನ್ನಡ ಪ್ರಾರಂಭದ ಗಮನಾರ್ಹ ಕಾದಂಬರಿಗಳಲ್ಲೊಂದಾದ ‘ಇಂದಿರೆ’ಯ ಕರ್ತೃ ಕೆರೂರು ವಾಸುದೇವಾಚಾರ್ಯರು 1866 ಅಕ್ಟೋಬರ್‌ 15 ಬಿಜಾಪುರ ಜಿಲ್ಲೆಯ ಬಾಗಲಕೋಟೆಯಲ್ಲಿ ಜನಿಸಿದರು. ನಳದಮಯಂತಿ ನಾಟಕವನ್ನು ರಚಿಸಿ ರಂಗದ ಮೇಲೂ ಪ್ರಯೋಗ ಮಾಡಿದ ಮೊದಲಿಗರು.ವಿಚಾರ ಪೂರ್ಣ ಸಂವೇದನಾಶೀಲತೆಯನ್ನು ಕಾದಂಬರಿಯಲ್ಲಿ ತರುವುದೇ ಇವರ ಪ್ರಮುಖ ಉದ್ದೇಶ. ಹಾಸ್ಯವನ್ನು ಬೆರೆಸಿ ಕಥೆಯ ಆಕರ್ಷಣೆಯನ್ನು ಹೆಚ್ಚಿಸುವುದು ಕೆರೂರರ ಅಭಿವ್ಯಕ್ತಿಯ ವೈಶಿಷ್ಟ .

ಆನಂತರ “ಯದು ಮಹಾರಾಜ, ಭಾತೃಘಾತಕ ಔರಂಗಜೇಬ, ವಾಲ್ಮೀಕಿ ವಿಜಯ, ಯವನ ಸೈರಂ” ಎಂಬ ಐದು ಕಾದಂಬರಿಗಳನ್ನು ರಚಿಸಿದರು. “ಪ್ರೇಮ ವಿಜಯ, ತೊಳೆದ ಮುತ್ತು, ಬೆಳಗಿದ ದೀಪಗಳು” ಕಥಾ ಸಂಗ್ರಹಗಳು. ವಸಂತ ಯಾಮಿನಿ (ಷೇಕ್ಸ್‌ಪಿಯರನ ಮಿಡ್ ಸಮ್ಮರ್ ನೈಟ್ಸ್‌ಡ್ರೀಮ್), ಸುರತ ನಗರದ ಶ್ರೇಷ್ಠಿ (ಮರ್ಚೆಂಟ್ ಆಫ್ ವೆನಿಸ್) ಮತ್ತು ಆಲಿವರ್ ಗೋಲ್ಡ್ ಸ್ಮಿತ್‌ನ ‘ಷಿ ಸ್ಟೂಪ್ಸ್ ಟು ಕಾನಕರ್’ ಎಂಬ ನಾಟಕಗಳನ್ನು ‘ವಶೀಕರಣ’ ಎಂಬ ಹೆಸರಿನಿಂದ ಅನುವಾದ ಮಾಡಿದ್ದಾರೆ. ಬಾಗಲಕೋಟೆಯ ವಾಸುದೇವ ವಿನೋದಿನಿ ನಾಟ್ಯ ಸಂಘದವರು 1964ರಲ್ಲಿ ‘ವಾಸುದೇವ ಪ್ರಶಸ್ತಿ’ ಎಂಬ ಸ್ಮಾರಕ ಸಂಪುಟವನನ್‌ಉ ಪ್ರಕಟಿಸಿತು. ಅವರು 1921 ಜನವರಿ 21ರಂದು ಈ ಇಹಲೋಕ ತ್ಯಜಿಸಿದರು. 

ಕೆರೂರು ವಾಸುದೇವಾಚಾರ್ಯ

(15 Oct 1866-09 Jan 1921)