About the Author

ಲೇಖಕ ಕೆ.ಎಂ.ವಿಶ್ವನಾಥ ಮರತೂರ, ಕಲಬುರ್ಗಿ ಜಿಲ್ಲೆಯ ಶಹಾಬಾದ್  ತಾಲೂಕಿನ ಮರತೂರು ಗ್ರಾಮದವರು. ಕಲಬುರ್ಗಿಯಲ್ಲಿ ಎಂ.ಎಸ್.ಸಿ. ಬಿ.ಈಡಿ.  ಪದವೀಧರರು. ಕುವೆಂಪು ಅವರ 109ನೇ ಜನ್ಮ ದಿನೋತ್ಸವದಂದು ಮೈಸೂರಿನಲ್ಲಿ ನಡೆದ ರಾಜ್ಯ ಕವನ ಸ್ಪರ್ಧೆಯಲ್ಲಿ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಪಡೆದವರು. 2015-16 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವತಿಯಿಂದ "ಜಾಗತೀಕರಣ & ದಲಿತರ ಸಂಕಷ್ಟಗಳು" ವಿಷಯದ ಮೇಲೆ ಫೆಲೋಶಿಪ್ (2015-16 ) ಪ್ರಬಂಧ ಹಾಗೂ ಇದೇ ಸಾಲಿನಲ್ಲಿ ವಿಶ್ವ ಅಕ್ಕ ಕನ್ನಡ ಸಮ್ಮೇಳನದ ಅಂತಾರಾಷ್ಟ್ರೀಯ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. “ಭಾರತದ ಭವಿಷ್ಯ ಮತ್ತು ಸಂವಿಧಾನ” ರಾಜ್ಯ ಪ್ರಬಂಧ ಸ್ಪರ್ಧೆಯಲ್ಲಿ ಇವರಿಗೆ ಪ್ರಥಮ ಸ್ಥಾನ ದೊರಕಿದೆ. 

ಶೈಕ್ಷಣಿಕ ಕ್ಷೇತ್ರದಲ್ಲಿ ಶಿಕ್ಷಕರು, ಮಕ್ಕಳು, ಸಮುದಾಯದೊಂದಿಗೆ ಸಂಪನ್ಮೂಲ ವ್ಯಕ್ತಿಯಾಗಿ, ಶಿಕ್ಷಣ ತಜ್ಞರಾಗಿ, ತರಬೇತಿದಾರನಾಗಿ ಕೆಲಸ ಮಾಡುತ್ತಿದ್ದಾರೆ.  ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿಗೆ ಪೂರಕ ತಂತ್ರಾಂಶಗಳು, ರಾಷ್ಟ್ರೀಯ ಮಟ್ಟದ ಬಾಲ ನ್ಯಾಯ ಕಾಯಿದೆ ಕುರಿತು ಮಂಡನೆ, ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ ಅನುಷ್ಠಾನ ಹೀಗೆ ವಿವಿಧೆಡೆ ಪ್ರಬಂಧಗಳನ್ನು ಮಂಡಿಸಿದ್ದಾರೆ. 

 ಕೃತಿಗಳು: ಭಾವಾಂತರಂಗ (ಕಥಾ ಸಂಕಲನ), ಕಟುಸತ್ಯ(ಪ್ರಚಲಿತ ವಿದ್ಯಮಾನಗಳ ಲೇಖನಗಳು), ಪಿಸುಮಾತು(ಕವನ ಸಂಕಲನ), ಆರಿಸಿದ ಹೂವುಗಳು(ಕವನ ಸಂಕಲನ) , ಹಸಿದ ಭಾರತ (ಲೇಖನ ಸಂಕಲನ), ಪ್ರಜ್ಞಾ (ಶೈಕ್ಷಣಿಕ ಅನುಭವಿಕ ಕಲೆ ಲೇಖನಗಳು), ಬೂದಿ ಮುಚ್ಚಿದ ಕೆಂಡ(ಪ್ರಬಂಧ ಸಂಕಲನ) , ಪ್ರೇರಣಾ ( ಸ್ಪೂರ್ತಿಯ ಜೀವನ ಲೇಖನಗಳು), ಮಕ್ಕಳು ಮೆಚ್ಚುವ ಶಿಕ್ಷಕರಾಗೋಣವೆ? (ಶೈಕ್ಷಣಿಕ ಲೇಖನಗಳು), ಜಾಗತೀಕರಣ ಮತ್ತು ದಲಿತರ ಸಂಕಷ್ಟಗಳು (ಫೆಲೋಶಿಪ್ ಸಂಶೋಧನಾ ಕೃತಿ), ಬೆಲ್ಲ ತಿಂದವನೇ ಬಲ್ಲ (ವೈಜ್ಞಾನಿಕ ಲೇಖನಗಳು)

ಪ್ರಶಸ್ತಿ-ಪುರಸ್ಕಾರಗಳು: ರಾಜ್ಯ ಕುವೆಂಪು ಕಾವ್ಯ ಪ್ರಶಸ್ತಿ, ರಂಗಶ್ರೀ ಕಾವ್ಯ ಪ್ರಶಸ್ತಿ, ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ,ಕವಿ ಕಾಳಿದಾಸ ಪ್ರಶಶ್ತಿ  ಲಭಿಸಿವೆ. 

 

 

 

 

 

 

ಕೆ.ಎಂ.ವಿಶ್ವನಾಥ ಮರತೂರ

(15 Jun 1985)