About the Author

ಕೊಡಗಿನ ಗೌರಮ್ಮನವರು ಕನ್ನಡದ ಮೊದಲ ಕಾದಂಬರಿಗಾರ್ತಿ ಕತೆಗಾರ್ತಿ ಎಂದರೆ ತಪ್ಪಾಗಲಾರದು. ಅವರು ಮಿಸೆಸ್ ಬಿ.ಟಿ.ಜಿ.ಕೃಷ್ಣ ಎನ್ನುವ ಹೆಸರಿನಲ್ಲಿ ಕತೆಗಳನ್ನು ಬರೆಯುತ್ತಿದ್ದರು. 1931 ರಿಂದ 1939ರವರೆಗೆ ಇವರು ರಚಿಸಿದ ಸಣ್ಣ ಕಥೆಗಳು ‘ಮಗುವಿನ ರಾಣಿ, ಕಂಬನಿ, ಚಿಗುರು’ ಗೌರಮ್ಮನ ಕಥೆಗಳು ಎಂಬ ಶೀರ್ಷಿಕೆಗಳಲ್ಲಿ ಪ್ರಕಟವಾಗಿವೆ. ಇವರು 1912ರಲ್ಲಿ ಮಡಿಕೇರಿಯಲ್ಲಿ ಜನಿಸಿದರು. ಸ್ವಾತಂತ್ರ್ಯ ಆಂದೋಲನದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಕೊಡಗಿನಲ್ಲಿ ಪ್ರವಾಸ ಕೈಗೊಂಡಾಗ ಅವರನ್ನು ತಮ್ಮ ಮನೆಗೆ ಬರಮಾಡಿಕೊಂಡು ತಮ್ಮ ಆಭರಣಗಳನ್ನೆಲ್ಲ ದಾನ ನೀಡಿದರು. ಗೌರಮ್ಮನವರು ತಮ್ಮ ಮನೆಯ ಸಮೀಪದ ಹೊಳೆಯಲ್ಲಿ ಈಜಲು ಹೋದಾಗ ಆಕಸ್ಮಿಕವಾಗಿ ಮುಳುಗಿ 1940ರಲ್ಲಿ ದುರಂತ ಸಾವಿಗೀಡಾದರು. ಇಲ್ಲವಾಗಿದ್ದರೆ ಕನ್ನಡ ಸಾರಸ್ವತ ಲೋಕಕ್ಕೆ ಮತ್ತಷ್ಟು ಕೊಡುಗೆ ನೀಡುತ್ತಿದ್ದಲ್ಲಿ ಸಂಶಯವಿಲ್ಲ.

ಕೊಡಗಿನ ಗೌರಮ್ಮ

(05 Mar 1912-13 Apr 1939)