About the Author

ಸಂಗಪ್ಪ ಕಲ್ಲಪ್ಪ ಕೊನೆಸಾಗರ 01-08-1964 ರಂದು ಕಲ್ಲಪ್ಪ ಹಾಗೂ ಪರಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಹುನಗುಂದ ಮತ್ತು ಬನ್ನಿಹಟ್ಟಿ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ತಿಗೊಳಿಸಿದರು. ಪ್ರೌಢ, ಪಿಯುಸಿ ಮತ್ತು ಬಿ.ಎ ಶಿಕ್ಷಣವನ್ನು ಹುನಗುಂದ ವಿ.ಎಂ ಹೈಸ್ಕೂಲ್ ಹಾಗೂ ವಿ.ಎಂ ಕಾಲೇಜಿನಲ್ಲಿ ನಡೆಸಿದರು. ಬಿಇಡಿ ಎಸ್.ಆರ್.ಕಂಠಿ ಬಿಇಡಿ ಕಾಲೇಜು ಇಳಕಲ್ಲ, ಸ್ನಾತಕೋತ್ತರ ಪದವಿಯನ್ನು(ಬಾಹ್ಯವಾಗಿ) ಇತಿಹಾಸ ಮತ್ತು ಪ್ರಾಚ್ಯವಸ್ತು ಸಂಶೋಧನಶಾಸ್ತ್ರ ಕವಿವಿ ಧಾರವಾಡದಲ್ಲಿ ಮಾಡಿದರು.

1996ರಿಂದ ಪ್ರಾಥಮಿಕ ಶಿಕ್ಷಕನಾಗಿ ಸೇವೆ ಪ್ರಾರಂಭಿಸಿದ ಅವರು ಮುಖ್ಯೋಪಾಧ್ಯಾಯನಾಗಿಯೂ ಸೇವೆ ಸಲ್ಲಿಸಿ, ಸದ್ಯ ಹುನಗುಂದ ವಿದ್ಯಾನಗರ ಶಾಲೆಯಲ್ಲಿ ಸಹಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1987ರಲ್ಲಿ ಬರಗಾಲ ವಾರಪತ್ರಿಕೆಗೆ ಸೇರ್ಪಡೆ(ಸುದ್ದಿ ಸಂಪಾದಕ),1990ರಲ್ಲ ಬೆಳವಲ ಸುದ್ದಿ ವಾರಪತ್ರಿಕೆಗೆ(ಸುದ್ದಿ ಸಂಪಾದಕ) ಸೇರಿ ಅಂಕಣ ಬರಹ ಆರಂಭ ಪ್ರಸ್ತುತ ವಿಚಾರಗಳ ವಿಶ್ಲೇಷಣಿ,1994ರಲ್ಲಿ ಪತ್ರಿಕಾ ಅಕಾಡೆಮಿ ತರಬೇತಿ-ಬಾಗಲಕೋಟ, ಇದರ ಜೊತೆಯಲ್ಲಿಯೇ ಕುರುಕ್ಷೇತ್ರ ಮತ್ತು ಸಂಯುಕ್ತ ಕರ್ನಾಟಕದಲ್ಲಿ ಒಂದಿಷ್ಟು ಲೇಖನಗಳು ಪ್ರಕಟ. 1994ರಿಂದ 3 ವರ್ಷ ಚಂದನ ದೂರದರ್ಶನ ಮತ್ತು ಧಾರವಾಡ ಆಕಾಶವಾಣಿಗೆ ಹವ್ಯಾಸಿ ಸುದ್ದಿಗಾರನಾಗಿ ಹುನಗುಂದದಲ್ಲಿ ಹಾರ, ಕೆಲವು ವರ್ಷ ಗುಲಬರ್ಗಾದ `ಕ್ರಾಂತಿ' ದಿನಪತ್ರಿಕೆಗೆ ಸುದ್ದಿಗಾರನಾಗಿಯೂ ಕಾರ 1995ರ ಆಗಸ್ಟ 5ರಿಂದ 2017 ನವೆಂಬರ್‌ 1 ರ ವರೆಗೆ 23 ವರ್ಷ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪಣೆಗಳಿಗೆ ಹುನಗುಂದ ಅರೆಕಾಲಕ ವರದಿಗಾರ(ಸ್ಟಿಂಟರ್) ನಾಗಿ ಕಾರ್ಯ ಪ್ರತಿವರ್ಷ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಡೆಸುವ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಪಾಲು, ಸಂವಾದದಲ್ಲಿ ಭಾಗವಹಿಸುವ, ಹುನಗುಂದದಲ್ಲಿ ಜಿಲ್ಲಾ ಮತ್ತು ತಾಲೂಕ ಮಟ್ಟದ ಪತ್ರಕರ್ತರ ತರಬೇತಿ ಕಾರ್ಯಾಗಾರ ಸಂಘಟನೆ, 2008 ರ ಉಡುಪಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಾಧ್ಯಮ ಗೋಷ್ಠಿಯಲ್ಲಿ ಸಂವಾದದಲ್ಲಿ ಭಾಗಿ, 2011ರಲ್ಲಿ ಮಾಧ್ಯಮ ಅಕಾಡೆಮಿ ಸಮೀರವಾಡಿಯಲ್ಲಿ ನಡೆಸಿದ ಕಾರ್ಯಗಾರದಲ್ಲ 'ಅಭ್ಯುದಯ ಪತ್ರಿಶೋದ್ಯಮ' ಹಾಗೂ ನಗರದ ವಿವಿಧ ಕಾಲೇಜುಗಳ ಎನ್‌ಎಸ್‌ಎಸ್ ಶಿಖರಗಳಲ್ಲಿ ಪತ್ರಿಕಾ ಕ್ಷೇತ್ರದ ವಿವಿಧ ವಿಷಯಗಳ ಮೇಲೆ ಉಪನ್ಯಾಸ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಕೃತಿಗಳು: ಕವನ ಸಂಕಲನ: ಬುಗ್ಗೆ (1992), ಸುವರ್ಣ ಕಾವ್ಯ(2007), ಕಾವ್ಯ ಸಂಗಮ (2016), ಸ್ಪಂದನ ಲೇಖನಗಳ ಸಂಗ್ರಹ( ನಾಲ್ಕೂ ಸಂಪಾದಿತ), ಆ ಸಂಜೆ ಹೋದವರು(2000), ಮೌನಧ್ಯಾನ(2010), ಮುಗಿಲ ಮರೆಯ ಮೋಡ(2015), ಊರ್ಮಿಳೆಯ ಉರಿ( 2019), ಹನಿವೊಡೆದ ಹೊತ್ತು(2020), ಎರಡು ದಶಕದ ಕವಿತೆ(2021), ಸಂಜೆ ಸೂರ್ಯನ ತಂಬೆಳಕು(2022).

ಕತಾಸಂಕಲನ: ದೇವರ ಮಗಳು 2021

ನಾಟಕ: ಮೂರು ನಾಟಕಗಳು 2018

ಲೇಖನ ಸಂಗ್ರಹಗಳು: ಮರೆಯದ ಮೃತ್ಯುಂಜಯ (1995), ಸಂಗಮ ಸೊಗಸು, ಸಂಗಮ ಸಂಭ್ರಮ ಸಂಚಿಕೆಗಳು 2014ರಿಂದ 2021(ಸಂಪಾದಿತ), ಎಲೆಯ ಮರೆಯಲ್ಲಿ (2004), ರಂಗಸ್ಪಂದನ(2006), ನುಡಿಬೆಡಗು(2011), ರಂಗದರ್ಶನ(2011), ರಂಗದೀವಿಗೆ(2017), ಹೊನ್ನ ಹೊನಲು( 2018), ಜಿಲ್ಲಾ ಸುದ್ದಿ ಸೊಗಡು( 2018), ನುಡಿಬಿಂಬ(2022)

ಪ್ರಶಸ್ತಿ: ವರ್ಷದ ಕನ್ನಡಿಗ 1994ಕೆ.ಎಚ್. ಡಿಸಿ ಕನ್ನಡ ಸಂಘ ಇಲಕಲ್ಲ), ಉತ್ತರ ಕರ್ನಾಟಕ ಯುವ ಲೇಖಕ 2007 (ಉತ್ತರ ಕರ್ನಾಟಕ ಯುವ ಲೇಖಕರ ವೇದಿಕ ವಿಜಯಪುರ) ಜಿಲ್ಲಾ ಆಡಳತ ಕೊಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 2013 (ಪತ್ರಿಕೋದ್ಯಮ ಕ್ಷೇತ್ರ) ಅದರಂತೆ ಕರ್ನಾಟಕ ರಾಜ್ಯ ಸರ್ಕಾರದ ಮಾಧ್ಯಮ ಅಕಾಡೆಮಿ 2011 ರ ಗೌರವ ಪ್ರಶಸ್ತಿ, ವಿಕ್ರಂ ಪೈಲ ಪುರಸ್ಕಾರ 2011(ವಿಕ್ರಂ ಪೈಲ ಪ್ರತಿಷ್ಠಾನ ಖಾದಾಮಿ ಮತ್ತು ಬೀಳಗಿ ಕಸಾಪ ದತ್ತಿ)(ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು) 2011 ರಲ್ಲಿ ತಾಲ್ಲೂಕು ಮಟ್ಟದ ಉತ್ತಮ ಗಣತಿದಾರ ಪ್ರಶಸ್ತಿ ಜಿಲ್ಲಾ ಆಡಂತ ಬಾಗಲಕೋಟೆ, 2018 ಫೆ24 ಮತ್ತು 25 ರಂದು ಬಾಗಲಕೋಟದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿriಯ ಸಾಹಿತಿ ಮತ್ತು ಇಳಕಲ್ಲ ಅಮ್ಮಾ ಸಂಸ್ಥೆಯ ಗೌರವ ಸನ್ಮಾನ.

ಎಸ್.ಕೆ.ಕೊನೆಸಾಗರ

(01 Aug 1964)