ಸಂಜೆ ಸೂರ್ಯನ ತಂಬೆಳಕು

Author : ಎಸ್.ಕೆ.ಕೊನೆಸಾಗರ

Pages 60

₹ 80.00




Year of Publication: 2022
Published by: ಸಂಗಮ ಪ್ರಕಾಶನ
Address: ನವನಗರ, ಹುನಗುಂದ -587 118 ಬಾಗಲಕೋಟೆ ಜಿಲ್ಲೆ

Synopsys

ಎಸ್ಕೆ.ಕೊನೆಸಾಗರ ಅವರ ಕವನ ಸಂಕಲನ ಸಂಜೆ ಸೂರ್ಯನ ತಂಬೆಳಕು. ಈ ಕೃತಿಗೆ ದಾನೇಶ್ವರಿ ಬಿ ಸಾರಂಗಮಠ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಎರಡು ದಶಕಗಳ ಅನನ್ಯ ಸಂವೇದನೆ, ಸಶಕ್ತ ಅಭಿವ್ಯಕ್ತಿಯಾಗಿ ರೂಪೂಗೊಂಡ ಫಸಲು 'ಸಂಜೆ ಸೂರ್ಯ ತಂಬೆಳಕು' ಕವನ ಸಂಕಲನ, ಭಿನ್ನ ಭಾವ, ನೆಲೆಗಳಲ್ಲಿ ಮತ್ತೆ ಮತ್ತೆ ಭೂತ-ವರ್ತಮಾನಗಳ ಕವಿತೆಗಳಿವು. ತಾವು ಅನುಭವಿಸಿದ್ದನ್ನು ಸ್ಪೋಪಜ್ಞತೆಯಿಂದ ಅಂದಗೊಳಿಸಿದ ಕವಿತೆಗಳಿಲ್ಲಿವೆ. ಎಂದಿನ ಶೈಲಿಯ ಪೌರಾಣಿಕ ವಸ್ತು, ಸೀಪರ ಕಾಳಜಿ, ಸಾವು, ದೇವರು, ತಾಯಿ ಮುಂತಾದ ವಸ್ತು ವೈವಿಧ್ಯತೆಗಳು ಒಂದಿಷ್ಟು ಪೌರಾಣಿಕ ಪ್ರಜ್ಞೆ, ಪರಿಸರ ಬೋಧ, ಕೌಟುಂಬಿಕ ಮಮಕಾರವನ್ನೂ ಉಂಟು ಮಾಡಿ ಸಂಜೆ ಸೂರ್ಯನ ತಂಬೆಳಕಿನಂತೆ ಕಂಡಿವೆ. ಆಪ್ತತೆ, ಆತ್ಮೀಯತೆಯ ಆವರಣವೊಂದರ ಸೃಷ್ಟಿ ಇಲ್ಲಿಯ ಕವಿತೆಯ ಓದಿನಿಂದ ದೊರೆಯುತ್ತದೆ. ಇಪ್ಪತ್ತೊಂದನೇ ಶತಮಾನದ ಜಾಗತೀಕರಣದ ಭೋಗ-ಹಿಂಸೆಯ ಆರ್ಭಟಗಳ ಉರಿ ಬಿಸಿಲು ಕವಿಯನ್ನು ತಲ್ಲಣಿಸುವಂತೆ ಮಾಡಿದೆ. ಹೀಗಾಗಿಯೇ ಅವರು ಸಂಜೆ ಸೂರ್ಯನ ತಂಬೆಳಕಿನ ಸಂಜೆ ಹಾಗೂ ತಂಬೆಳಕನ್ನು ಏಕೀಭವಿಸಿ ಅನುಸಂಧಾನಗೊಳಿಸಿದ್ದು ಕವಿಯ ಜಾಣೆಗೆ ಕನ್ನಡಿ ಹಿಡಿದಿದೆ. ಇಲ್ಲಿನ ಕಾವ್ಯದ ಕಸುವೆಂದರೆ, ರೂಪಕಗಳ ನುಡಿಗಟ್ಟು, ಭಾವನಾತ್ಮಕ ತೀವ್ರತೆ ಹಾಗೂ ಮರೆಯಿಲ್ಲದ ಜೀವಪ್ರೀತಿ, ಹೃದಯದ ಮೂಲಕವೇ ಲೋಕದ ವಿದ್ಯಮಾನಗಳನ್ನು ನೋಡಿ ಅವುಗಳಿಗೆ ಪ್ರತಿಕ್ರಿಯಿಸುವುದು, ಸ್ವಾಸ್ಥ್ಯ ಸಮಾಜಕ್ಕಾಗಿ ತುಡಿತ ಇವರ ಬರಬಣಿಗೆಯ ಜೀವಸೆಲೆ. ಎಣ್ಣೆ ಕೊನೆಸಾಗರ ಅವರ ಈ ಭಾಷಾಸಾಧ್ಯತೆಗಳ ಬಗೆಗಿನ ಪ್ರಯೋಗ ಏನಾದರೊಂದು ಹೊಸತನ್ನು ಅವರಿಂದ ಹೊಮ್ಮಿಸುತ್ತಲೇ ಇರುತ್ತದೆ. ಅಷ್ಟರ ಮಟ್ಟಿಗೆ ಕನ್ನಡ ಸಾಹಿತ್ಯ ಶ್ರೀಮಂತವಾಗುತ್ತದೆ ಎಂದಿದ್ದಾರೆ.

About the Author

ಎಸ್.ಕೆ.ಕೊನೆಸಾಗರ
(01 August 1964)

ಸಂಗಪ್ಪ ಕಲ್ಲಪ್ಪ ಕೊನೆಸಾಗರ 01-08-1964 ರಂದು ಕಲ್ಲಪ್ಪ ಹಾಗೂ ಪರಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಹುನಗುಂದ ಮತ್ತು ಬನ್ನಿಹಟ್ಟಿ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ತಿಗೊಳಿಸಿದರು. ಪ್ರೌಢ, ಪಿಯುಸಿ ಮತ್ತು ಬಿ.ಎ ಶಿಕ್ಷಣವನ್ನು ಹುನಗುಂದ ವಿ.ಎಂ ಹೈಸ್ಕೂಲ್ ಹಾಗೂ ವಿ.ಎಂ ಕಾಲೇಜಿನಲ್ಲಿ ನಡೆಸಿದರು. ಬಿಇಡಿ ಎಸ್.ಆರ್.ಕಂಠಿ ಬಿಇಡಿ ಕಾಲೇಜು ಇಳಕಲ್ಲ, ಸ್ನಾತಕೋತ್ತರ ಪದವಿಯನ್ನು(ಬಾಹ್ಯವಾಗಿ) ಇತಿಹಾಸ ಮತ್ತು ಪ್ರಾಚ್ಯವಸ್ತು ಸಂಶೋಧನಶಾಸ್ತ್ರ ಕವಿವಿ ಧಾರವಾಡದಲ್ಲಿ ಮಾಡಿದರು. 1996ರಿಂದ ಪ್ರಾಥಮಿಕ ಶಿಕ್ಷಕನಾಗಿ ಸೇವೆ ಪ್ರಾರಂಭಿಸಿದ ಅವರು ಮುಖ್ಯೋಪಾಧ್ಯಾಯನಾಗಿಯೂ ಸೇವೆ ಸಲ್ಲಿಸಿ, ಸದ್ಯ ಹುನಗುಂದ ವಿದ್ಯಾನಗರ ಶಾಲೆಯಲ್ಲಿ ಸಹಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1987ರಲ್ಲಿ ...

READ MORE

Related Books