About the Author

ಹಾಸನ ಜಿಲ್ಲೆ ಮತಿಘಟ್ಟದವರಾದ ಎಲ್.ಗುಂಡಪ್ಪ ಅವರು ಕನ್ನಡದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಅವರ ತಂದೆ ಲಿಂಗಣ್ಣಯ್ಯ ಮತ್ತು ತಾಯಿ ಚನ್ನಮ್ಮ. ಮೈಸೂರು ವಿಶ್ವವಿದ್ಯಾಲಯದ ಸಿಲ್ವರ್ ಜ್ಯೂಬಿಲಿ ಕನ್ನಡ ಸ್ವರ್ಣಪದಕ ವಿಜೇತರಾಗಿದರು. ತಮಿಳು - ಕನ್ನಡ ಬಾಂಧವ್ಯಕ್ಕಾಗಿ ಶ್ರಮಿಸಿದಕ್ಕಾಗಿ ಅವರಿಗೆ ನಾಗರ್ ಕೋಯಲಿನಲ್ಲಿ ಬಂಗಾರದ ಪದಕ ನೀಡಿ ಗೌರವಿಸಲಾಗಿತ್ತು. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಹಿರಿಮೆ ಅವರದು.

ಕಳ್ಳಮರಿ, ಮಕ್ಕಳ ರವೀಂದ್ರರು, ರವೀಂದ್ರನಾಥ ಠಾಕೂರರ ಜೀವನ ವ್ಯಕ್ತಿತ್ವ ಪರಿಚಯ (ಭಾರತ ಸರ್ಕಾರದ ಬಹುಮಾನಗಳಿಸಿರುವ ಕೃತಿ). ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪಠ್ಯಪುಸ್ತಕ ರಚಿಸಿರುವ ಅವರಿಗೆ ಅಕಾಡೆಮಿ ಪ್ರಶಸ್ತಿ ಹಾಗೂ ದೇವರಾಜ ಬಹದ್ದೂರ್ ಬಹುಮಾನ ದೊರೆತಿದೆ. ಅವರ 52 ಕೃತಿಗಳು ಪ್ರಕಟವಾಗಿವೆ.

ಎಲ್. ಗುಂಡಪ್ಪ

(08 Jan 1903-17 Dec 1986)