ತಿರುಕ್ಕುರಳ್

Author : ಎಲ್. ಗುಂಡಪ್ಪ

Pages 273

₹ 90.00




Year of Publication: 2007

Synopsys

ಕುರುಳ್ ಅಥವಾ ತಿರುಕ್ಕುರುಳ್ ತಮಿಳಿನ ವೇದವೆಂದೇ ಕೊಂಡಾಡಲ್ಪಟ್ಟ ಭಕ್ತಿಯಿಂದ ಅಲ್ಲಿಯ ಜನತೆ ಸ್ವೀಕರಿಸಿರುವ ಗ್ರಂಥ. ಎಲ್ಲಾ ಕಡೆಗಳಿಂದಲೂ ಒಳ್ಳೆಯದನ್ನು ಆರಿಸಿಕೊಂಡು ಮಾಲೆಯಾಗಿ ಪೋಣಿಸಿ ಈ ಕೃತಿಯನ್ನು ರಚಿಸಿದ್ದಾರೆ. ಈ ಪುಸ್ತಕದಲ್ಲಿರುವ ನಾಲ್ಕು ಪುರುಷಾರ್ಥಗಳಲ್ಲಿ ಮೂರನ್ನು, ಅಂದರೆ ಧರ್ಮ, ಅರ್ಥ ಮತ್ತು ಕಾಮಗಳನ್ನು ಕುರಿತ ಮೂರು ಭಾಗಗಳಿವೆ. ವಾಮನನು ತನ್ನೆರಡು ಪಾದಗಳಿಂದ ವಿಶ್ವವನ್ನೆಲ್ಲಾ ಆಕ್ರಮಸಿದಂತೆ, ದ್ರಾವಿಡ ಛಂದಸ್ಸಿನಲ್ಲಿಯೇ ಅತ್ಯಂತ ಚಿಕ್ಕದಾದ ಕುರುಳ್ ಎಂಬ ಛಂದಸ್ಸಿನಲ್ಲಿ ವಿಶ್ವದ ಜ್ಞಾನವನ್ನೆಲ್ಲಾ ತನ್ನಲ್ಲಿ ಅಡಗಿಸಿಕೊಂಡಿದೆ. ಈ ಕೃತಿಯನ್ನು ಕನ್ನಡ, ತಮಿಳು ಎರಡೂ ಭಾಷೆಗಳಲ್ಲಿ ಅದ್ವಿತೀಯ ಪಾಂಡಿತ್ಯವನ್ನು ಹೊಂದಿದ್ದಎಲ್ ಗುಂಡಪ್ಪನವರು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಎಲ್. ಗುಂಡಪ್ಪ
(08 January 1903 - 17 December 1986)

ಹಾಸನ ಜಿಲ್ಲೆ ಮತಿಘಟ್ಟದವರಾದ ಎಲ್.ಗುಂಡಪ್ಪ ಅವರು ಕನ್ನಡದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಅವರ ತಂದೆ ಲಿಂಗಣ್ಣಯ್ಯ ಮತ್ತು ತಾಯಿ ಚನ್ನಮ್ಮ. ಮೈಸೂರು ವಿಶ್ವವಿದ್ಯಾಲಯದ ಸಿಲ್ವರ್ ಜ್ಯೂಬಿಲಿ ಕನ್ನಡ ಸ್ವರ್ಣಪದಕ ವಿಜೇತರಾಗಿದರು. ತಮಿಳು - ಕನ್ನಡ ಬಾಂಧವ್ಯಕ್ಕಾಗಿ ಶ್ರಮಿಸಿದಕ್ಕಾಗಿ ಅವರಿಗೆ ನಾಗರ್ ಕೋಯಲಿನಲ್ಲಿ ಬಂಗಾರದ ಪದಕ ನೀಡಿ ಗೌರವಿಸಲಾಗಿತ್ತು. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಹಿರಿಮೆ ಅವರದು. ಕಳ್ಳಮರಿ, ಮಕ್ಕಳ ರವೀಂದ್ರರು, ರವೀಂದ್ರನಾಥ ಠಾಕೂರರ ಜೀವನ ವ್ಯಕ್ತಿತ್ವ ಪರಿಚಯ (ಭಾರತ ಸರ್ಕಾರದ ಬಹುಮಾನಗಳಿಸಿರುವ ಕೃತಿ). ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪಠ್ಯಪುಸ್ತಕ ರಚಿಸಿರುವ ಅವರಿಗೆ ಅಕಾಡೆಮಿ ಪ್ರಶಸ್ತಿ ಹಾಗೂ ದೇವರಾಜ ಬಹದ್ದೂರ್ ಬಹುಮಾನ ದೊರೆತಿದೆ. ಅವರ 52 ಕೃತಿಗಳು ಪ್ರಕಟವಾಗಿವೆ. ...

READ MORE

Related Books