About the Author

ಲಕ್ಷ್ಮೀ ಬಸವರಾಜ್‌ ಮೂಲತಃ ಬೆಂಗಳೂರಿನವರು. ಎಂ.ಎ. (ನೃತ್ಯ) ಮತ್ತು ಪಿಹೆಚ್.ಡಿ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದ ನೃತ್ಯ ನಾಟಕ ಮತ್ತು ಸಂಗೀತ ವಿಭಾಗದಿಂದ ಪಡೆದಿದ್ದಾರೆ. ವಸಂತಲಕ್ಷ್ಮಿಯವರ ಶಿಷ್ಯಯಾಗಿ ಅನೇಕ ನೃತ್ಯ ರೂಪಕ ಮತ್ತು ನೃತ್ಯನಾಟಕಗಳಲ್ಲಿ ಭಾಗವಹಿಸಿದ್ದಾರೆ. ಶಾಲಾ ದಿನಗಳಲ್ಲೇ ನೃತ್ಯದ ಕಡೆಗೆ ಆಸಕ್ತಿಯಿದ್ದು, ಹಲವಾರು ವರ್ಷ ಪರಿಶ್ರಮವಹಿಸಿ, ಶ್ರದ್ಧೆಯಿಂದ ಕಲಿತು ನೂರಾರು ನೃತ್ಯ ಪ್ರದರ್ಶನಗಳನ್ನು ದೇಶ ವಿದೇಶಗಳಲ್ಲಿ ನೀಡಿದ್ದಾರೆ. ಹಾಗೆಯೇ ಸಂಗೀತ ಮತ್ತು ನಾಟಕಾಭಿನಯ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ್ದಾರೆ.

ಕೃತಿಗಳು: ನಾಟ್ಯಶಾಸ್ತ್ರದ ದೃಷ್ಟಿಯಲ್ಲಿ ಗೀತಗೋವಿಂದ

ಲಕ್ಷ್ಮೀ ಬಸವರಾಜ್‌