About the Author

ಲ.ನ.ಶಾಸ್ತ್ರಿ ಎಂತಲೇ ಪರಿಚಿತರಾಗಿರುವ ಕವಿ, ಕಾದಂಬರಿಕಾರ, ಧಾರ್ಮಿಕ ಸಾಹಿತ್ಯ ರಚನಕಾರರಾದ ಲಕ್ಷ್ಮೀನರಸಿಂಹಶಾಸ್ತ್ರಿ ಹುರಗಲವಾಡಿ ಅವರು ಜನಿಸಿದ್ದು 1929 ಮೇ 12ರಂದು. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿಮ ಹುರುಗಲವಾಡಿ ಇವರ ಹುಟ್ಟೂರು. ಮಂಡ್ಯದಲ್ಲಿಯೇ ಇಂಟರ್‌ ಮೀಡಿಯೇಟ್‌ ಶಿಕ್ಷಣ ಪಡೆದ ಇವರು ಅಂಚೆ ಇಲಾಖೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. 

ಇವರ ಪ್ರಮುಖ ಕೃತಿಗಳೆಂದರೆ ಪೂರ್ವರಾಗ (ಕವಿತಾಸಂಕಲನ), ರಸಾಗೌತಮಿ, ಊರ್ವಶಿ (ಕಥನಕವನಗಳು), ಮಾರೀಚ (ನಾಟಕ), ಧರೆಗಿಳಿದ ದಿವ್ಯತೇಜ (ಕಾದಂಬರಿ), ಶ್ರೀ ಜಗದ್ಗುರು (ಸಂಪಾದನೆ), ಸಂಭಾಷಣ ತರಂಗಿಣಿ, ಶ್ರೀ ಸಚ್ಚಿದಾನಂದ ಭಾರತಿ (ಜೀವನಚರಿತ್ರೆಗಳು), ಅಳಸಿಂಗ ಪೆರುಮಾಳ್ ಇತ್ಯಾದಿ.

ಲಕ್ಷ್ಮೀನರಸಿಂಹಶಾಸ್ತ್ರಿ ಹುರಗಲವಾಡಿ

(12 May 1929)