About the Author

ವೈಚಾರಿಕ ಚಿಂತನೆಗಳಲ್ಲಿ ತೊಡಗಿಸಿಕೊಂಡವರು ಲಲಿತಾಂಬ ವೃಷಭೇಂದ್ರ ಸ್ವಾಮಿ. ಬಿ.ಎ., ಎಂ.ಇಡಿ., ಡಿ.ಟಿ.ಇ. ಪದವೀಧರರು. ನಿವೃತ್ತ ಪ್ರವಾಚಕರು. 23-08-1930 ರಂದು ಜನಿಸಿದರು. ತಂದೆ ಶ್ರೀಕಂಠಶರ್ಮ ಉಬ್ರಾಣಿಮಠ, ತಾಯಿ ಗಿರಿಜಾಂಬ. 

ಮನದ ಮಲ್ಲಿಗೆ (ವೈಚಾರಿಕ ಲೇಖನಗಳು), ವಚನಾಂಜಲಿ (ವಿಮರ್ಶೆ ವಿಶ್ಲೇಷಣೆ), ಮುನಿದೆ ಏಕಮ್ಮ ನೆಲದಾಯಿ (ಕವನ ಸಂಗ್ರಹ), ಮಕ್ಕಳ ಶಿಕ್ಷಣ ಚಿಂತನೆಗಳು (ಚಿಂತನಾ ಲೇಖನಗಳು), ಪುಟ್ಟನಿಗೆ ಹಿತೈಷಿಗಳ ಪತ್ರಗಳು, ಶಿವಶರಣೆಯರು (ಚರಿತ್ರೆ), ಸಜ್ಜನಗುಡ್ಡದ ಶರಣಮ್ಮನವರು (ವ್ಯಕ್ತಿಚಿತ್ರ), ಪತ್ರೆ ಚನ್ನವೀರಪ್ಪನವರು (ಬದುಕುಸಾಧನೆ), ರಚನಾತ್ಮಕ ಚಿಂತನೆಗಳು, ಬೇರೊಂದು ಮರವೆರಡು (ಸಣ್ಣಕಥೆಗಳು) - ಪ್ರಕಟಿತ ಮುಖ್ಯ ಕೃತಿಗಳು.

ಅವರ ‘ವಚನಾಂಜಲಿ’ ಕೃತಿಗೆ ಕಾವ್ಯಾನಂದ ಪ್ರಶಸ್ತಿ, ‘ಮಕ್ಕಳ ಶಿಕ್ಷಣ ಚಿಂತನೆಗಳು’ ಕೃತಿಗೆ ಮಾತೃಶ್ರೀ ರತ್ನಮ್ಮ ಹೆಗಡೆಯವರ ದತ್ತಿ ಬಹುಮಾನ ಲಭಿಸಿವೆ.

ಲಲಿತಾಂಬ ವೃಷಭೇಂದ್ರ ಸ್ವಾಮಿ

(23 Aug 1930)