ಬೇರೊಂದು ಮರವೆರಡು

Author : ಲಲಿತಾಂಬ ವೃಷಭೇಂದ್ರ ಸ್ವಾಮಿ

Pages 186

₹ 60.00




Year of Publication: 2000
Published by: ಪ್ರಸಾದ ಪ್ರಕಾಶನ
Address: ಕಲ್ಯಾಣನಗರ, ಧಾರವಾಡ

Synopsys

‘ಬೇರೊಂದು ಮರವೆರಡು’ ವೃಷಭೇಂದ್ರ ಸ್ವಾಮಿ ಅವರ ಕಥಾಸಂಕಲನವಾಗಿದೆ. ಕುಟುಂಬಗಳಲ್ಲಿ ನೆಮ್ಮದಿ-ಸಂತೋಷಗಳು ನೆಲೆಸಲು ಗೃಹಿಣಿಯೋರ್ವಳೇ ಕಾರಣವಲ್ಲ. ಮನೆಯ ಎಲ್ಲ ಸದಸ್ಯರೂ ಹೊಂದಾಣಿಕೆ-ಸಾಮರಸ್ಯ ರೂಢಿಸಿಕೊಳ್ಳಬೇಕಾದ ಮಹತ್ವವನ್ನು ಕಥೆಗಳ ಮೂಲಕ ನಿರೂಪಿಸಲಾಗಿದೆ. ಯಶಸ್ವೀ ಪ್ರಾಧ್ಯಾಪಕಿ, ಉತ್ತಮ ಗೃಹಿಣಿಯೂ ಆಗಿರುವ ಲೇಖಕಿ ಇಲ್ಲಿ ಹೆಣೆದಿರುವ ಕಥೆಗಳು ಕಾಲ್ಪನಿಕವಲ್ಲ. ತಾವು ಸಮೀಪದಿಂದ ಗಮನಿಸಿದ ನಮ್ಮ ಸುತ್ತ ಇರುವ ದೈನಂದಿನ ಸಮಸ್ಯೆಗಳೇ ಆಗಿವೆ. ಕಥೆಗಳನ್ನೋದಿ ನಮ್ಮಲ್ಲೂ ಡೊಂಕಿದ್ದರೆ ತಿದ್ದಿಕೊಳ್ಳೋಣ.

About the Author

ಲಲಿತಾಂಬ ವೃಷಭೇಂದ್ರ ಸ್ವಾಮಿ
(23 August 1930)

ವೈಚಾರಿಕ ಚಿಂತನೆಗಳಲ್ಲಿ ತೊಡಗಿಸಿಕೊಂಡವರು ಲಲಿತಾಂಬ ವೃಷಭೇಂದ್ರ ಸ್ವಾಮಿ. ಬಿ.ಎ., ಎಂ.ಇಡಿ., ಡಿ.ಟಿ.ಇ. ಪದವೀಧರರು. ನಿವೃತ್ತ ಪ್ರವಾಚಕರು. 23-08-1930 ರಂದು ಜನಿಸಿದರು. ತಂದೆ ಶ್ರೀಕಂಠಶರ್ಮ ಉಬ್ರಾಣಿಮಠ, ತಾಯಿ ಗಿರಿಜಾಂಬ.  ಮನದ ಮಲ್ಲಿಗೆ (ವೈಚಾರಿಕ ಲೇಖನಗಳು), ವಚನಾಂಜಲಿ (ವಿಮರ್ಶೆ ವಿಶ್ಲೇಷಣೆ), ಮುನಿದೆ ಏಕಮ್ಮ ನೆಲದಾಯಿ (ಕವನ ಸಂಗ್ರಹ), ಮಕ್ಕಳ ಶಿಕ್ಷಣ ಚಿಂತನೆಗಳು (ಚಿಂತನಾ ಲೇಖನಗಳು), ಪುಟ್ಟನಿಗೆ ಹಿತೈಷಿಗಳ ಪತ್ರಗಳು, ಶಿವಶರಣೆಯರು (ಚರಿತ್ರೆ), ಸಜ್ಜನಗುಡ್ಡದ ಶರಣಮ್ಮನವರು (ವ್ಯಕ್ತಿಚಿತ್ರ), ಪತ್ರೆ ಚನ್ನವೀರಪ್ಪನವರು (ಬದುಕುಸಾಧನೆ), ರಚನಾತ್ಮಕ ಚಿಂತನೆಗಳು, ಬೇರೊಂದು ಮರವೆರಡು (ಸಣ್ಣಕಥೆಗಳು) - ಪ್ರಕಟಿತ ಮುಖ್ಯ ಕೃತಿಗಳು. ಅವರ ‘ವಚನಾಂಜಲಿ’ ಕೃತಿಗೆ ಕಾವ್ಯಾನಂದ ಪ್ರಶಸ್ತಿ, ‘ಮಕ್ಕಳ ಶಿಕ್ಷಣ ಚಿಂತನೆಗಳು’ ಕೃತಿಗೆ ಮಾತೃಶ್ರೀ ರತ್ನಮ್ಮ ...

READ MORE

Related Books