About the Author

ಲತಾ ಮೈಸೂರು ಹುಟ್ಟಿದ್ದು1966ರಲ್ಲಿ. ಮೈಸೂರಿನವರಾದ ಲತಾ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನಲ್ಲಿಯೇ ಪೂರ್ಣಗೊಳಿಸಿ, 1989ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ. ಎ. ಪದವಿ ಪಡೆದಿದ್ದಾರೆ. ಮಹಾರಾಜ ಕಾಲೇಜು ಸೇರಿದಂತೆ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಒಟ್ಟು 21 ವರ್ಷಗಳ ಕಾಲ ಉಪನ್ಯಾಸ ವೃತ್ತಿಯಲ್ಲಿ ಸೇವೆ ಸಲ್ಲಿಸಿರುವ ಅವರು ಸದ್ಯ ಮೈಸೂರಿನ ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

'ಬಸವಣ್ಣನ ಕಲ್ಯಾಣ ಹುಡುಕುತ್ತಾ...' (ಬಸವಣ್ಣನ ಕ್ರಾಂತಿಮಾರ್ಗ: ಕನ್ನಡ ಸಾಹಿತ್ಯ ಸಂದರ್ಭದಲ್ಲಿ' ಎಂಬ ಸಂಶೋಧನಾ ಪಿಎಚ್,ಡಿ. ಪದವಿ) 1993ರಲ್ಲಿ 'ಆವರಣ' (ಕವನ ಸಂಕಲನ) 2007ರಲ್ಲಿ 'ಮೇಲಾಗಲೊಲ್ಲೆನು (ಬಸವಣ್ಣನ ಜನ್ಮಶರಣ ಕುಲ ಸಂಬಂಧ-ಸಂಶೋಧನಾ ಕೃತಿ) ಪ್ರಕಟಿತ ಕೃತಿಗಳು. ನಾಡಿನ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಲೇಖನ-ಪತ್ರ-ಕವಿತೆಗಳು ಪ್ರಕಟವಾಗಿವೆ. ಜಾತಿವಿನಾಶಮಾನವ ಸೌಹಾರ್ದ ಚಳವಳಿಗಳಲ್ಲಿ ಹಾಗೂ ರಾಸಾಯನಿಕಮುಕ್ತ ನೈಸರ್ಗಿಕ ಕೃಷಿ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಲತಾ ಮೈಸೂರು