About the Author

ಲೇಖಕಿ ಲೀಲಾ ಮಣ್ಣಾಲ ಅವರು 1953 ಜೂನ್‌ 20 ಪುತ್ತೂರಿನ ಮಣ್ಣಾಲದಲ್ಲಿ ಜನಿಸಿದರು.  ಸ್ನಾತಕೋತ್ತರ ಪದವೀಧರೆ. ಅಮ್ಮ ಪ್ರೌಢಾಶಾಲಾ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ್ದಾರೆ. ತಂದೆ ಗಿಳಿಯಾಲ ಈಶ್ವರಭಟ್, ತಾಯಿ ಪಾರ್ವತಿ.

‘ಹೊಣೆ ಮತ್ತು ಇತರ ಕಥೆಗಳು, ತೆರೆ, ಮುಸ್ಸಂಜೆ ಹಕ್ಕಿಗಳು, ಮತ್ತೆ ಬಂದಿದೆ ಯುಗಾದಿ’ ಅವರ ಪ್ರಕಟಿತ ಕೃತಿಗಳು.

‘ವಿಭಿನ್ನರು ಮತ್ತು ಅನಾವರಣ, ನಿಮ್ಮ ನಿನಾದ, ಕೆಂಪು ಚಿನ್ನ’ - ಕಾವ್ಯ, ‘ಮಧು ಮಂಟಪ’ - ನಾಟಕ, ‘ನವರಸಾಭಿನಯ, ರಸವರ್ಷ, ಭಾವರಸಧಾರೆ’ - ಕಾದಂಬರಿ, ‘ಪಿಂಕಿಯ ಪ್ರಪಂಚ, ಬಾ ಕಂದ ಹಾಡೋಣ, ಪುಣ್ಯಕೋಟಿ, ಜೀಮೂತ ವಾಹನ, ಅಪೂರ್ವ ಲೋಕ’ - ಬಾಲಸಾಹಿತ್ಯ. 

‘ನಿರಂತರ ಸತ್ಯ, ಬಾಪೂ ಬದುಕಿನ ಸ್ವಾರಸ್ಯಗಳು, ಮಹರ್ಷಿ ದಯಾನಂದ ಸರಸ್ವತಿ-ಬದುಕು ಮತ್ತು ವಿಚಾರಧಾರೆ’ ಮುಂತಾದ ಮಹನೀಯರ ಜೀವನ ಚಿತ್ರಣಗಳನ್ನು ಹೊರತಂದಿದ್ದಾರೆ. ‘ವಿಚಾರ ಸಾಹಿತ್ಯ ಬಿಂದುವಿನಿಂದ ಸಿಂಧುವಿನೆಡೆಗೆ’ ಎಂಬ ಕೃತಿಯನ್ನೂ,  ಪಾಕಶಾಸ್ತ್ರಕ್ಕೆ ಸಂಬಂಧಿಸಿದಂತೆ ಸ್ವಾದಿಷ್ಠ ಉಪಹಾರ, ರಸದೌತಣ ಕೃತಿಗಳನ್ನೂ ಪ್ರಕಟಿಸಿದ್ದಾರೆ.

‘ನಿಮ್ಮ ನಿನಾದ’ ಕಾದಂಬರಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಕೆಂಪು ಚಿನ್ನ ಕಾದಂಬರಿಗೆ ಎಂ.ಕೆ. ಇಂದಿರಾ ಪ್ರಶಸ್ತಿ, ತೆರೆಗೆ ತರಂಗ ಬಹುಮಾನ, ಕೊಡಗಿನ ಗೌರಮ್ಮ ಬಹುಮಾನ ಲಭಿಸಿವೆ. 

ಲೀಲಾ ಮಣ್ಣಾಲ

(20 Jun 1953)