About the Author

ಲೀಲಾ ಪ್ರಕಾಶ್ ಕೆ., ಎಂ.ಎ., ಪಿಎಚ್.ಡಿ.(ಸಂಸ್ಕೃತ) ಪದವೀಧರರು. ಸುಶ್ರುತ ಆಯುರ್ವೇದ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿದ್ದಾರೆ. 1959ರ ಜುಲೈ 18ರಂದು ಜನನ. ಡಾ. ಕೆ. ಕೃಷ್ಣಮೂರ್ತಿ, ಸರೋಜಮ್ಮಅವರ ಮಗಳಾಗಿ ಧಾರವಾಡದಲ್ಲಿ ಜನಿಸಿದರು.

ವಿಮಲಾ (2004)ರಲ್ಲಿ ಪ್ರಕಟವಾದ ಕಾದಂಬರಿ. ಅನಿವಾಸಿ ಹಾಗೂ ಇತರೆ  ಕಥೆಗಳು (2008) ಕವನ ಸಂಕಲನ : ಸಮನ್ವಿತಾ, ಕಾವ್ಯವಲ್ಲರಿ (2006) ಕಥಾಸಂಕಲನಗಳನ್ನು ಹೊರತಂದಿದ್ದಾರೆ. 

ವೈದ್ಯಕೀಯ ಸುಭಾಷಿತ ಸಾಹಿತ್ಯ (2002) ಕನ್ನಡಕ್ಕೆ ಭಾಷಾಂತರಿಸಿದ್ದು, ಕನ್ನಡ ಭಗವದ್ಗೀತೆ (2005) ಪ್ರಕಟವಾಯಿತು.

  ಸಿರಿಗನ್ನಡ ಭಗವದ್ಗೀತೆ (ಕನ್ನಡಕ್ಕೆ ರೂಪಾಂತರ) ರಚಿಸಿದ್ದಾರೆ.

ಹೊಯ್ಸಳ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' 'ಕೆ.ಎಸ್. ನರಸಿಂಹಸ್ವಾಮಿ ರಾಜ್ಯ ಪ್ರೇಮಕವಿ ಪ್ರಶಸ್ತಿ', 'ಡಾ ರಾಜ್ ರಾಜ್ಯ ಪ್ರಶಸ್ತಿ, 'ದಸರಾ ಅರಳು ಕವಿಗೋಷ್ಠಿ ಪ್ರಶಸ್ತಿ' 'ಪ್ರವಚನ ಪಟು ಹಾಗೂ ವಿದ್ಯಾನಿಧಿ' ಗೌರವ ಪ್ರಶಸ್ತಿಗಳು ಇವರಿಗೆ ಸಂದಿವೆ.

ಅನಂತ ಪತ್ರಿಕೆ, ಸಂಸ್ಕೃತ ವರ್ಷಾಚರಣ ಸಮಿತಿ, ಕಾರ್ಯಕಾರಿ ಸದಸ್ಯೆಯಾಗಿ, : ಡಾ. ಕೆ.ಕೃಷ್ಣಮೂರ್ತಿ ಅಭಿನಂದನಾ ಮಂಡಳಿ, ಕರ್ನಾಟಕ ಹಾಗೂ ಅಮೆರಿಕೆಯಲ್ಲಿ ಅನೇಕ ಕಡೆಗಳಲ್ಲಿ ಪ್ರವಚನ ನೀಡಿದ್ದಾರೆ.

ಲೀಲಾ ಪ್ರಕಾಶ್ ಕೆ