ಸಂಪ್ರದಾನ

Author : ಲೀಲಾ ಪ್ರಕಾಶ್ ಕೆ

Pages 168

₹ 150.00
Year of Publication: 2017
Published by: ಅಂಕಿತ ಪುಸ್ತಕ
Address: 53, ಗಾಂಧಿ ಬಜಾರ್‍ ಮುಖ್ಯರಸ್ತೆ, ಬಸವನಗುಡಿ , ಬೆಂಗಳೂರು -560004
Phone: 08026617100/ 26617755

Synopsys

ಕಾದಂಬರಿಕಾರ , ಸಾಹಿತಿ ದೊಡ್ಡೇರಿ ವೆಂಕಟಗಿರಿರಾವ್  ಬರೆದಿರುವ ಕಾದಂಬರಿ ’ಸಂಪ್ರದಾನ’.

ಮಿ. ಗುನ್ನರ್‍ ಮಾಟ್ಸನ್ ಫಿನ್ ಲ್ಯಾಂಡಿನ ಒಬ್ಬ ಪ್ರಸಿದ್ದ ಬರಹಗಾರ. ಅವರ ಜೀವನವನ್ನಾಧರಿಸಿದ ಕೆಲವು ಸಂಗತಿಗಳು ಈ ಕಾದಂಬರಿಯ ರಚನೆಗೆ ಸ್ಫೂರ್ತಿಯಾಗಿವೆ.  ಈ ಮೊದಲು ಈ ಕಾದಂಬರಿ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯ ಸರಣಿಯಲ್ಲಿ ಪ್ರಕಟವಾಗುತ್ತಿತ್ತು. 1982 ರಲ್ಲಿ ಈ ಕೃತಿ ಪ್ರಥಮ ಮುದ್ರಣ ಕಂಡಿತು. ಇದೀಗ ಮೂರನೇ ಮುದ್ರಣವು 2017 ರಲ್ಲಿ ಕಂಡಿದೆ.

ಅಸೀಮ ಅವ್ಯಾಜ ಪ್ರೇಮ, ಪ್ರಿಯ ಪರಿಸರ, ಸುಯೋಗ್ಯ ಚಿಕಿತ್ಸೆ ಮತ್ತು ಪೋಷಣೆಗಳು  ಒಬ್ಬ ರೋಗಿಯ ಮನಸ್ಸಿನ ಮೇಲೆ , ತನ್ಮೂಲಕ ದೇಹದ ಮೇಲೆ ಸಂತೃಪ್ತಿಯುತ ಹಿತಕರ ಪ್ರಭಾವ ಬೀರಿ ರೋಗ ನಿವಾರಣೆಗೆ ಅತ್ಯಂತ ಸಹಕಾರಿ ಆಗುತ್ತದೆ ಎಂಬುದನ್ನು ತಿಳಿಸುವ ಪ್ರಯತ್ನ ಈ ಕಾದಂಬರಿ ಮಾಡಿದೆ.

About the Author

ಲೀಲಾ ಪ್ರಕಾಶ್ ಕೆ

ಲೀಲಾ ಪ್ರಕಾಶ್ ಕೆ., ಎಂ.ಎ., ಪಿಎಚ್.ಡಿ.(ಸಂಸ್ಕೃತ) ಪದವೀಧರರು. ಸುಶ್ರುತ ಆಯುರ್ವೇದ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿದ್ದಾರೆ. 1959ರ ಜುಲೈ 18ರಂದು ಜನನ. ಡಾ. ಕೆ. ಕೃಷ್ಣಮೂರ್ತಿ, ಸರೋಜಮ್ಮಅವರ ಮಗಳಾಗಿ ಧಾರವಾಡದಲ್ಲಿ ಜನಿಸಿದರು. ವಿಮಲಾ (2004)ರಲ್ಲಿ ಪ್ರಕಟವಾದ ಕಾದಂಬರಿ. ಅನಿವಾಸಿ ಹಾಗೂ ಇತರೆ  ಕಥೆಗಳು (2008) ಕವನ ಸಂಕಲನ : ಸಮನ್ವಿತಾ, ಕಾವ್ಯವಲ್ಲರಿ (2006) ಕಥಾಸಂಕಲನಗಳನ್ನು ಹೊರತಂದಿದ್ದಾರೆ.  ವೈದ್ಯಕೀಯ ಸುಭಾಷಿತ ಸಾಹಿತ್ಯ (2002) ಕನ್ನಡಕ್ಕೆ ಭಾಷಾಂತರಿಸಿದ್ದು, ಕನ್ನಡ ಭಗವದ್ಗೀತೆ (2005) ಪ್ರಕಟವಾಯಿತು.   ಸಿರಿಗನ್ನಡ ಭಗವದ್ಗೀತೆ (ಕನ್ನಡಕ್ಕೆ ರೂಪಾಂತರ) ರಚಿಸಿದ್ದಾರೆ. ಹೊಯ್ಸಳ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' 'ಕೆ.ಎಸ್. ನರಸಿಂಹಸ್ವಾಮಿ ರಾಜ್ಯ ಪ್ರೇಮಕವಿ ಪ್ರಶಸ್ತಿ', ...

READ MORE

Related Books