About the Author

ಸಾಹಿತಿ, ಅನುವಾದಕಿ  ಲೀಲಾದೇವಿ ಆರ್. ಪ್ರಸಾದ್ ಅವರು ಕರ್ನಾಟಕದ ಮಾಜಿ  ಸಚಿವೆ. 1933 ಜನವರಿ 12 ರಂದು ಧಾರವಾಡದಲ್ಲಿ ಜನಿಸಿದರು.  ತಂದೆ - ವಿ.ಎಸ್. ಹಿರೇಮಠ, ತಾಯಿ - ಗುರುದೇವಿ ಹಿರೇಮಠ .

‘ಹೆಣ್ಣ ಮೇಲಿನ ಹೆಣ್ಣು’(ಕಾದಂಬರಿ), ಸಂಜೀವಿನಿ (ನಾಟಕ), ‘ಅಕ್ಕಮಹಾದೇವಿ’ (ಜೀವನ ಚರಿತ್ರೆ),  ಗುರುದೇವಿ ಹಿರೇಮಠ, ಸುಶೀಲಾ ಕೊಪ್ಪರ (ಕೃತಿ), ಸಾಹೇಬರ ಮಗಳು (ಆತ್ಮಕಥೆ)  ಅವರ ಪ್ರಕಟಿತ ಕೃತಿಗಳು. 

’20ನೇ ಶತಮಾನದ ಕರ್ನಾಟಕ ರಾಜಕೀಯದಲ್ಲಿ ಮಹಿಳೆ’, ಮಹಾದೇವಿ ಅಕ್ಕನ ಕ್ಷೇತ್ರಗಳು' ಅವರ ಸಂಶೋಧನಾ ಕೃತಿಗಳು. ಅಕ್ಕಮಹಾದೇವಿ (ಸಮಗ್ರ ಸಂಪುಟ) ‘ಬಾಗಿನ’, ನಿರುಪಮ ಲೋಕ (ನಿರುಪಮಾ ಅಭಿನಂದನ ಗ್ರಂಥದ ಪ್ರಧಾನ ಸಂಪಾದಕರು) ಪ್ರಕಟಿಸಿದ್ದಾರೆ.

ಕನ್ನಡತಿ (ಪ್ರಬಂಧಗಳು), ಅಷ್ಟಾವರಣ, ‘ಜಗತ್ತಿನಲ್ಲಿ ಜೀವಿಸುವ ಬಗೆ (ಮರಾಠಿಯಿಂದ ಕನ್ನಡಕ್ಕೆ), ಅಷ್ಟಾವರಣ -ಸ್ವಂತ ಕೃತಿ ಇಂಗ್ಲಿಷಿಗೆ ತಂದಿದ್ದಾರೆ.

ನುಡಿಚಿಂತನ (ಲೇಖನ ಸಂಗ್ರಹ), ಸಹಕಾರ ಮತ್ತು ಮಹಿಳೆ, ಉಳಿತಾಯ ಮತ್ತು ಮಹಿಳೆ, ಉಳಿತಾಯದ ವಿಶ್ವರೂಪ, ಸಿಡಿದೆದ್ದ ಸೀ, ಕಾವ್ಯ: ನಾ ಒಲಿದಂತೆ ಹಾಡುವೆ, ವಚನ ತರಂಗ, ಮನ ಮಿಡಿದ ಮಾತು, ಅಕ್ಕ ಮಹಾದೇವಿ ಲೈಫ್ ಅಂಡ್ ವಚನಾಸ್ ಕೃತಿಗಳು ಪ್ರಕಟವಾಗಿದೆ.

ಕಾರ್ಪೊರೇಶನ್ ಚುನಾವಣೆ ಮೂಲಕ ರಾಜಕೀಯ ಪ್ರವೇಶ ಮಾಡಿದ ಅವರು, ಸಹಕಾರ ಸಾಮಾಜಿಕ, ಶಿಕ್ಷಣ, ಅಧ್ಯಾತ್ಮಿಕ ಕ್ಷೇತ್ರ ಹೀಗೆ ತಮ್ಮ ಕಾರ್ಯ ಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದು, ಕೇಂದ್ರ ಹಾಗೂ ರಾಜ್ಯಸರ್ಕಾರದ ಸಣ್ಣ ಉಳಿತಾಯ ಸಂಸ್ಥೆಯಲ್ಲಿ ಒಂದು ದಶಕದ ಸೇವೆ ಸಲ್ಲಿಸಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರು ಮಹಿಳಾ ವಿಭಾಗದ ಸಂಚಾಲಕಿಯಾಗಿ, ಕರ್ನಾಟಕ ಸರ್ಕಾರದಲ್ಲಿ ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವೆಯಾಗಿ,  ರಾಜ್ಯ ಸಭಾ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. 

‘ಸಹಕಾರ ರತ್ನ, ಕರ್ನಾಟಕ ಸರ್ಕಾರದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಎಳಂದೂರಿನ ಸಂಚಿಯ ಹೊನ್ನಮ್ಮ ಪ್ರಶಸ್ತಿ, 'ಅಕ್ಕ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಬೆಳ್ಳಿ ಆನೆ ಪ್ರಶಸ್ತಿ ಭಾರತ ಸೈಟ್ ಮತ್ತು ಗೈಡ್ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಉಡುತಡಿ ಅಕ್ಕಮಹಾದೇವಿ ಸಮಿತಿ ಅಧ್ಯಕ್ಷರಾಗಿ, ಕೇಂದ್ರ ಸಮಾಜ ಕಲ್ಯಾಣ ಹಾಗೂ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಸದಸ್ಯರಾಗಿ, ಕರ್ನಾಟಕ ಮಹಿಳಾ ಸಹಕಾರಿ ಬ್ಯಾಂಕ್ ಸ್ಥಾಪಕ ಅಧ್ಯಕ್ಷತೆ ವಹಿಸಿ ಕರ್ನಾಟಕ ಲೇಖಕಿಯರ ಸಂಘದ ಮಾಜಿ ಉಪಾಧ್ಯಕ್ಷೆಯಾಗಿ, ಬೆಂಗಳೂರು ನಗರ ಕಾಪೋರೇಷನ್ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಲೀಲಾದೇವಿ ಆರ್. ಪ್ರಸಾದ್

(12 Jan 1933)