About the Author

ಎಂ.ಸಿ.ಡೋಂಗ್ರಿಯವರು ಭಗವದ್ಗೀತೆ ಒಂದು ವಿಮರ್ಶೆ ಎಂಬ ವಿಮರ್ಶಾ ಕೃತಿಯನ್ನು ರಚಿಸಿದ್ದಾರೆ.  ಯಾವುದೇ ಕೃತಿಯನ್ನು ಬರೆವಾಗ ಆಳವಾದ ಅಧ್ಯಯನ ನಡೆಸುವ ಡೋಂಗ್ರಿಯವರು ಈ ಕೃತಿಯನ್ನು ಸಹ ತಮ್ಮ ಅಧ್ಯಯನದ ಮೂಲಕವೇ ರಚಿಸಿದ್ದಾರೆ. ಕೃತಿಯಲ್ಲಿ ಒಟ್ಟು ಆರು ಭಾಗಗಳಿವೆ. ಮೊದಲ ಭಾಗದಲ್ಲಿ ಭಗವದ್ಗೀತೆಯ ಕಾಲ ನಿರ್ಣಯವನ್ನು ಮಾಡುತ್ತಾರೆ. ಗೀತೆಯನ್ನು ಯಾವಾಗ ರಚಿಸಲಾಯಿತು, ಭಗವದ್ಗೀತೆಗೆ ಶಂಕರಾಚಾರ್ಯರ ಕೊಡುಗೆ ಮತ್ತು ಆಚಾರ್ಯರ ಕೃತಿಗಳು ಅವರ ವ್ಯಕ್ತಿತ್ವ ಭಗವದ್ಗೀತೆಯ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಿದೆ ಎನ್ನುವುದನ್ನು ಈ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. 

ಎಂ.ಸಿ.ಡೋಂಗ್ರಿ