About the Author

ಎಂ.ಜಿ. ರಂಗಸ್ವಾಮಿ ಅವರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ 25 ,03,1962 ರಂದು ಜನಿಸಿದರು. ತಂದೆ ಆರ್. ಗುಡುವಯ್ಯ, ತಾಯಿ ಎಂ.ರಂಗಮ್ಮ. ಸ್ವಗ್ರಾಮ ಹಾಗೂ ಚಿತ್ರದುರ್ಗದಲ್ಲಿ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣವನ್ನು ಪೂರೈಸಿ, ಮೈಸೂರು ಯುವರಾಜ ಕಾಲೇಜಿನಲ್ಲಿ ಬಿ.ಎಸ್ಸಿ, ಪದವಿ, ಮಾನಸ ಗಂಗೋತ್ರಿಯಲ್ಲಿ ಡಿಪ್ಲೋಮಾ-ಇನ್-ಇಂಗ್ಲಿಷ್ ಹಾಗೂ ಆಂಗ್ಲ ಸಾಹಿತ್ಯದಲ್ಲಿ ಎಂ.ಎ. ಪದವಿಯನ್ನು ಪಡೆದರು.

ಮೂವತ್ತೈದು ವರ್ಷಗಳ ಕಾಲ ಹಿರಿಯೂರು ತಾಲ್ಲೂಕು ಧರ್ಮಪುರ ಗ್ರಾಮದ ಶ್ರೀಪಂಚಲಿಂಗೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲಭಾಷಾ ಉಪನ್ಯಾಸಕರಾಗಿ ನಂತರ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ಮಾರ್ಚ್ 31, 2022 ರಂದು ನಿವೃತ್ತರಾಗಿದ್ದಾರೆ. ಇವರ ಕೆಲವು ಬಿಡಿಲೇಖನಗಳು ದಿನಪತ್ರಿಕೆ, ಸ್ಮರಣಸಂಚಿಕೆ, ವಿಶೇಷ ಪುರವಣೆಗಳಲ್ಲಿ ಪ್ರಕಟವಾಗಿವೆ. 'ಹಿರಿಯೂರು ಸೀಮೆ ಜಾನಪದ' ಎಂಬ ಇವರ ಕೃತಿಯನ್ನು 2014 ರಲ್ಲಿ ಸಿವಿಜಿ ಇಂಡಿಯಾ ಪ್ರಕಟಿಸಿದೆ. 'ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್”(ಪ್ರ: ಸಿವಿಜಿ ಪಬ್ಲಿಕೇಷನ್ಸ್ ಬೆಂಗಳೂರು, 2021) ಹಾಗೂ 'ಮಾರಿ ಕಣಿವೆ'-ವಾಣಿವಿಲಾಸ ಸಾಗರ ನಿರ್ಮಾಣದ ಕತೆ(ಪ: ತೇಜಸ್ ಇಂಡಿಯಾ ಬೆಂಗಳೂರು,2022) ಎಂಬ ಎರಡು ಅನುವಾದಿತ ಕೃತಿಗಳು ಪ್ರಕಟವಾಗಿವೆ. 'ತುಮಕೂರು ಜಿಲ್ಲೆಯಲ್ಲಿ ಬುಕಾನನ್' ಮೂರನೇ ಅನುವಾದಿತ ಕೃತಿ.

ಎಂ.ಜಿ. ರಂಗಸ್ವಾಮಿ

(25 Mar 1962)