About the Author

ಎಂ. ಎಚ್. ನಾಗರಾಜು ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮರಳೇನಹಳ್ಳಿಯವರು. ಮರಳೇನಹಳ್ಳಿ, ದೊಡ್ಡಬಳ್ಳಾಪುರ, ಬೆಂಗಳೂರುಗಳಲ್ಲಿ ಶಿಕ್ಷಣ ಪೂರೈಸಿ, ರಾಜ್ಯದ ವಿವಿಧ ಪದವಿ ಪೂರ್ವ ಕಾಲೇಜುಗಳಲ್ಲಿ ಇತಿಹಾಸ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸದ್ಯ ನಿವೃತ್ತರು. ತುಮಕೂರಲ್ಲಿ ವಾಸವಾಗಿದ್ದಾರೆ. ಏಕಕಾಲದಲ್ಲಿ ಇತಿಹಾಸ-ಸಾಹಿತ್ಯ ಸಮ್ಮಿಲನ, ಜೊತೆಯಲ್ಲಿ ಗಾಂಧಿ, ಅಂಬೇಡ್ಕರ್, ಬಸವ, ಬುದ್ಧರ ಚಿಂತನೆಗಳನ್ನು ಸಮಗ್ರೀಕರಿಸಿದ ರೀತಿಯಲ್ಲಿ ಇವರ ಬರಹಗಳಿವೆ.

ಕೃತಿಗಳು :  ಒಕ್ಕಲಿಗರು ಮತ್ತು ಪರಭೇದಗಳು, ಕುಂಚಿಟಿಗರ ಒಕ್ಕಲಿಗರವಲ್ಲವೇ?’, ಮರೆಯಲಾಗದ ಮಾಲಿಮರಿಯಪ್ಪ, ‘ಸಾಧನೆಯ ಹಾದಿಯಲ್ಲಿ ಬಿ.ರಂಗಣ್ಣ’, ‘ಫೌಜುದಾರ್ ಬೋರೇಗೌಡ, ‘ಗುಬ್ಬಿಹೊಸಹಳ್ಳಿ ಪ್ರಭುಗಳು, ‘ಧರ್ಮಪ್ರಕಾಶನ ಡಿ. ಬನುಮಯ್ಯ’, ‘ಸಾಮಾಜಿಕ ಹೋರಾಟಗಾರ W.H ಹನುಮಂತಪ್ಪ ’ ಮೊದಲಾದವುಗಳು.

ಎಂ. ಎಚ್. ನಾಗರಾಜು