About the Author

ಮೈಸೂರಿನಲ್ಲಿ ಎಂ. ಹಿರಿಯಣ್ಣ ಜನಿಸಿದ್ದ 07-05-1871 ರಂದು. ಪ್ರಾಥಮಿಕ ವಿದ್ಯಾಭ್ಯಾಸ ಮೈಸೂರಿನಲ್ಲಿ. ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಿಂದ ಬಿ.ಎ. ಮತ್ತು ಎಂ.ಎ. ಪದವೀಧರರು. ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟಿನ ಲೈಬ್ರರಿಯನ್ ಆಗಿದ್ದರು. ಮದರಾಸಿನ ಸೈದಾ ಪೇಟೆಯ ಟೀಚರ್ಸ್ ಕಾಲೇಜಿನಲ್ಲಿ ಎಲ್.ಟಿ. ಪದವಿ ಪಡೆದು ಮೈಸೂರಿನ ಗೌರ‍್ನಮೆಂಟ್ ನಾರ್ಮಲ್ ಸ್ಕೂಲಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರಾಗಿ ನಿವೃತ್ತರಾದರು. ಡಾ. ರಾಧಾಕೃಷ್ಣನ್ ಮುಂತಾದ ಮಹಾನ್ ವ್ಯಕ್ತಿಗಳೊಡನೆ ಸಂಪರ್ಕವಿತ್ತು. ಔಟ್‌ಲೈನ್ಸ್ ಆಫ್ ಇಂಡಿಯನ್ ಫಿಲಾಸಫಿ, ದಿ ಎಸೆನ್‌ಷಿಯಲ್ಸ್ ಆಫ್ ಇಂಡಿಯನ್ ಫಿಲಾಸಫಿ, ಪಾಪ್ಯುಲರ್ ಎಸ್ಸೇಸ್ ಇನ್ ಇಂಡಿಯನ್ ಫಿಲಾಸಫಿ, ದಿ ಕ್ವೆಸ್ಟ್ ಆಫ್ಟ್‌ರ್ ಫರ್‌ಫೆಕ್ಷನ್, ಆರ್ಟ್ ಎಕ್ಸ್‌ಪೀರಿಯನ್ಸ್, ಸಂಸ್ಕೃತ ಸ್ಟಡೀಸ್, ಇಂಡಿಯನ್ ಫಿಲಾಸಫಿಕಲ್ ಸ್ಟಡೀಸ್, ದಿ ಮಿಷನ್ ಆಫ್ ಫಿಲಾಸಫಿ ಇತ್ಯಾದಿ ಗ್ರಂಥಗಳನ್ನು ರಚಿಸಿದ್ದಾರೆ. ಈಶಾವ್ಯಾಸೋಪನಿಷತ್, ಕೇನೋಪನಿಷದ್, ಕಾಠಕೋಪನಿಷದ್, ಬೃಹದಾರಣ್ಯಕೋಪನಿಷದ್ ಇಂಗ್ಲಿಷ್‌ಗೆ ಅನುವಾದಿತ ಗ್ರಂಥಗಳು. ನೈಷ್ಕರ್ಮ ಸಿದ್ಧಿ (ಸುರೇಶಾಚಾರ್ಯ), ವೇದಾಂತಸಾರ (ಸದಾನಂದ) ಇಷ್ಟಸಿದ್ಧಿ ಇವು ಸಂಪಾದಿತ ಗ್ರಂಥಗಳು. ಏಷಿಯಾಟಿಕ್ ಸೊಸೈಟಿ (ಲಂಡನ್), ಮಿಥಿಕ್ ಸೊಸೈಟಿ ಬೆಂಗಳೂರು, ಮದರಾಸಿನ ಫಿಲಸಾಫಿಕಲ್ ಪತ್ರಿಕೆಗಳಿಗೆ ಲೇಖನಗಳನ್ನು ಬರೆದರು. ಸಂಸ್ಕೃತ ಅಕಾಡಮಿಯಿಂದ ‘ಸಂಸ್ಕೃತ ಸೇವಾಧುರೀಣ’ ಗೌರವ ಸಂದಿದೆ. 19-09-1950 ರಂದು ನಿಧನರಾದರು. ನಂತರ ಶತಮಾನೋತ್ಸವ ಕಮೆಮೊರೇಷನ್ ವಾಲ್ಯೂಮ್ ಗ್ರಂಥ ಪ್ರಕಟಿಸಿ ಅಭಿಮಾನಿಗಳು ಗೌರವ ತೋರಿಸಿದರು. 

ಎಂ. ಹಿರಿಯಣ್ಣ

(07 May 1871-19 Sep 1950)