About the Author

ಗೀತರಚನೆಕಾರ, ಕವಿ ಎಂ.ಎನ್. ವ್ಯಾಸರಾವ್‌ ಅವರು 1946 ಜನವರಿ 27ರಂದುಮೈಸೂರಿನಲ್ಲಿ ಜನಿಸಿದರು. ತಂದೆ ನರಸಿಂಗರಾವ್, ತಾಯಿ ಸುಶೀಲಮ್ಮ. ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರಿ ವಿಶ್ವವಿದ್ಯಾಲದಿಂದ ಬಿ.ಎ ಪದವಿ ಪಡೆದರು. ಬೆಂಗಳೂರಿನ ಯುನೈಟೆಡ್‌ ಕಮರ್ಶಿಯಲ್ ಬ್ಯಾಂಕ್‌ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದರು. 

ಇವರ ಮಳೆಯಲ್ಲಿ ನೆನೆದ ಮರಗಳು ಕಥಾಸಂಕಲನಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ ಹಾಗೂ ಬರ್ಕಲೀ ತರಂಗಿಣಿ ಪ್ರಶಸ್ತಿ, ಲಾವಣ್ಯ ಪ್ರಶಸ್ತಿ, ಜೇಸೀ ಪ್ರಶಸ್ತಿ, ಸ್ವರಮಂದಾರ ಪ್ರಶಸ್ತಿ, ಆರ್ಯಭಟ ಪ್ರಶಸ್ತಿಗಳು ಸಂದಿವೆ. ಬೆಳ್ಳಿ ಮೂಡುವ ಮುನ್ನ ಹಾಗೂ ಇರಲಿ ನಿನ್ನ ಪ್ರೀತಿ (ಕವನ ಸಂಕಲನ); ಮೋಸಾಪನ ಕತೆಗಳು (ಅನುವಾದ) ಇವರ ಪ್ರಮುಖ ಕೃತಿಗಳು.

ಎಂ.ಎನ್. ವ್ಯಾಸರಾವ್

(27 Jan 1946-15 Jul 2018)