ಚಂಡಿದಾಸನ ಪ್ರೇಮ ಕವಿತೆಗಳು

Author : ಎಂ.ಎನ್. ವ್ಯಾಸರಾವ್

Pages 168

₹ 200.00




Year of Publication: 2020
Published by: ಸಾಹಿತ್ಯ ಅಕಾದೆಮಿ
Address: ಭಾಷಾಂತರ ಕೇಂದ್ರ, ಬೆಂಗಳೂರು
Phone: 08022245152

Synopsys

ಕವಿ ಎಂ.ಎನ್. ವ್ಯಾಸರಾವ್‌ ಅವರನುವಾದಿತ ಕವನ ಸಂಕಲನ ‘ಚಂಡಿದಾಸನ ಪ್ರೇಮ ಕವಿತೆಗಳು’. ಕವಿ ದೇಬೆನ್ ಭಟ್ಟಾಚಾರ್ಯ ಅವರು ಮೂಲ ಬಂಗಾಳಿಯಿಂದ ಇಂಗ್ಲಿಷ್ ಅನುವಾದ ಹಾಗೂ ಪ್ರಸ್ತಾವನೆಯನ್ನು ಮಾಡಿದ್ದಾರೆ. ಚಂಡಿದಾಸ ಬಂಗಾಳದ ಮಧ್ಯಯುಗೀನ ಭಕ್ತಿ ಕವಿ. ರಾಧಾ-ಕೃಷ್ಣರ ಪ್ರೇಮ ರೂಪಕದಲ್ಲಿ ಭಕ್ತಿಯನ್ನು ನೀವೇದಿಸುವ ಚಂಡೀದಾಸ ಕಳೆದ ಐದು ಶತಮಾನಗಳಲ್ಲಿ ಬಂಗಾಳವನ್ನು ಃಆಗೂ ಭಾರತೀಯ ಕಾವ್ಯ ಪರಂಪರೆಯ ಂಏಲೆ ಹಲವು ರೀತಿಯ ಪ್ರಭಾವ ಬೀರಿದ ಕವಿ. ಭಾರತೀಯ ಪರಂಪರೆ ಹಾಗೂ ಭಕ್ತಿ ಕಾವ್ಯದ ಅಧ್ಯಯನ ಚಂಡಿದಾಸನ ಕಾವ್ಯವಿಲ್ಲದೆ ಪುರ್ಣವಾಗದು. ಭಕ್ತ ಸತಿ-ದೇವ (ಲಿಂಗ) ಪತಿ ಎಂಬ ಕನ್ನಡ ಭಕ್ತಿ ಖಾವ್ಯ ಗ್ರಹಿಕೆಗೆ ಪೂರಕವಾಗಿ ಕನ್ನಡ ಓದುಗರಿಗೆ ಚಂಡಿದಾಸನ ಕಾವ್ಯದ ಪರಿಚಯವಾದರೆ ಉತ್ತಮ ಎಂಬ ಅಭಿಪ್ರಾಯದಿಂದ ಈ ಅನುವಾದಕ್ಕೆ ತೊಡಗಿಕೊಂಡಿತು ಎಂಬುದಾಗಿ ಗೌರವ ನಿರ್ದೇಶಕರು ಎಸ್. ಆರ್. ವಿಜಯಶಂಕರ ಅವರು ಕೃತಿಯಲ್ಲಿ ಬರೆದಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಚಂಡಿದಾಸನ ಪ್ರೇಮ ಕವಿತೆಗಳು, ದ್ವಿಜ ಚಂಡಿದಾಸ, ಬಡು ಚಂಡಿದಾಸ, ಹಾಗೂ ಸಹಜ ಗೀತೆಗಳು ಎಂಬಂತೆ ವಿಭಾಗಗಳಿವೆ. 105 ಅನುವಾದಿತ ಕವನಗಳು ಈ ಕೃತಿಯಲ್ಲಿವೆ.

About the Author

ಎಂ.ಎನ್. ವ್ಯಾಸರಾವ್
(27 January 1946 - 15 July 2018)

ಗೀತರಚನೆಕಾರ, ಕವಿ ಎಂ.ಎನ್. ವ್ಯಾಸರಾವ್‌ ಅವರು 1946 ಜನವರಿ 27ರಂದುಮೈಸೂರಿನಲ್ಲಿ ಜನಿಸಿದರು. ತಂದೆ ನರಸಿಂಗರಾವ್, ತಾಯಿ ಸುಶೀಲಮ್ಮ. ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರಿ ವಿಶ್ವವಿದ್ಯಾಲದಿಂದ ಬಿ.ಎ ಪದವಿ ಪಡೆದರು. ಬೆಂಗಳೂರಿನ ಯುನೈಟೆಡ್‌ ಕಮರ್ಶಿಯಲ್ ಬ್ಯಾಂಕ್‌ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದರು.  ಇವರ ಮಳೆಯಲ್ಲಿ ನೆನೆದ ಮರಗಳು ಕಥಾಸಂಕಲನಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ ಹಾಗೂ ಬರ್ಕಲೀ ತರಂಗಿಣಿ ಪ್ರಶಸ್ತಿ, ಲಾವಣ್ಯ ಪ್ರಶಸ್ತಿ, ಜೇಸೀ ಪ್ರಶಸ್ತಿ, ಸ್ವರಮಂದಾರ ಪ್ರಶಸ್ತಿ, ಆರ್ಯಭಟ ಪ್ರಶಸ್ತಿಗಳು ಸಂದಿವೆ. ಬೆಳ್ಳಿ ಮೂಡುವ ಮುನ್ನ ಹಾಗೂ ಇರಲಿ ನಿನ್ನ ಪ್ರೀತಿ (ಕವನ ಸಂಕಲನ); ...

READ MORE

Related Books