About the Author

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣ ದೇವರ ಕೆರೆ ಗ್ರಾಮದಲ್ಲಿ 1940ರ ಜುಲೈ 11 ರಂದು ಎಂ.ಪಿ. ಪ್ರಕಾಶ (ಮರಿಸ್ವಾಮಯ್ಯ ಮಠದ ಪಾಟೀಲ ಪ್ರಕಾಶ) ಜನಿಸಿದರು.

ಲೇಖಕ, ನಟ, ರಂಗಕರ್ಮಿ, ಮೃದುಭಾಷಿ, ಸಾಂಸ್ಕೃತಿಕ ಜೀವಿ   ಹಾಗೂ ಸಜ್ಜನ ರಾಜಕಾರಣಿ ಹೀಗೆ ಬಹುಮುಖ ವ್ಯಕ್ತಿತ್ವದ ಎಂ.ಪಿ.ಪ್ರಕಾಶ, ವೃತ್ತಿಯಿಂದ ವಕೀಲರು. 1964 ರಲ್ಲಿ ಹಡಗಲಿಗೆ ಆಗಮಿಸಿ, 1973 ರಲ್ಲಿ ವಿಧಾನ ಪರಿಷತ್ತಿಗೆ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. 1979 ರಲ್ಲಿ ಹಡಗಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. ಆದರೂ ಛಲಬಿಡದೇ 1983 ರಲ್ಲಿ ಹಡಗಲಿ ವಿಧಾನಸಭೆಗೆ ಸ್ಪರ್ಧಿಸಿ ಗೆದ್ದರು. ಅಂದಿನಿಂದ ರಾಜಕೀಯ ಜೀವನದಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುತ್ತಾ ಬಂದ ಪ್ರಕಾಶ್, ಈ ಮಧ್ಯೆ, ಸಾಹಿತ್ಯ, ನಟನೆ, ರಂಗಭೂಮಿ ಹೀಗೆ ಹಲವು ವಲಯಗಳಲ್ಲಿ ಶ್ರಮಿಸಿದರು. ಕರ್ನಾಟಕ ರಾಜ್ಯ ಸರ್ಕಾರದ ಸಚಿವರಾಗಿ, ಉಪಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದರು.

ರಂಗಭೂಮಿಯ ನಿರಂತರ ಚಟುವಟಿಕೆಗಳಿಗಾಗಿ ಹೂವಿನ ಹಡಗಲಿಯಲ್ಲಿ ’ರಂಗಭಾರತಿ’  ಸಂಸ್ಥೆ ಸ್ಥಾಪಿಸಿದರು. ಡೋಮಿಂಗೊಸ್ ಪಯಾಸ್ ಕಂಡ ವಿಜಯನಗರ (ಅನುವಾದ) ಸೂರ್ಯ ಶಿಕಾರಿ (ನಾಟಕ), ಪ್ರೀತಿಯೇ ದೇವರು ಮತ್ತು ಇತರೆ ಕಥೆಗಳು (ಅನುವಾದ), ರಾಜಕೀಯ ಸುಧಾರಣೆಗಳು ಹಾಗೂ ರಾಜಕೀಯ ಸಂಕಲ್ಪದ ಅಭಾವ (ಮೂಲ: ರಾಮಕೃಷ್ಣ ಹೆಗಡೆ, ಅನುವಾದ: ಎಂಪಿ.ಪ್ರಕಾಶ ಹಾಗೂ ವಿದ್ಯಾಶಂಕರ), ಕಳಿಂಗ ಸೂರ್ಯ ಮತ್ತು ಇತರೆ ಲೇಖನಗಳು, ನನ್ನ ಜೀವನ ಮತ್ತು ರಾಜಕೀಯ (ಇಂಗ್ಲಿಷ್ ಮೂಲ: ಎಸ್.ನಿಜಲಿಂಗಪ್ಪ, ಅನುವಾದ: ಎಂ.ಪಿ.ಪ್ರಕಾಶ) 1998 ರಲ್ಲಿ ನಾಟಕ ಅಕಾಡೆಮಿ ಫೆಲೋಶಿಪ್ ಪಡೆದಿದ್ದರು.1986 ರಲ್ಲಿ ಸರ್ಕಾರದ ವತಿಯಿಂದ ಹಂಪಿ ಉತ್ಸವವನ್ನು ಆರಂಭಿಸಿದವರೇ ಎಂ.ಪಿ. ಪ್ರಕಾಶ. 

ಎಂ.ಪಿ. ಪ್ರಕಾಶ

(11 Jul 1940)