
‘ವಿಜಯನಗರ’ ಎಂ. ಪಿ. ಪ್ರಕಾಶ್, ಸೀತಾಲಕ್ಷ್ಮಿ ಶ್ರೀನಿವಾಸ್, ಆರ್. ಗೋಪಾಲ್ ಅವರ ಅನುವಾದ ಕೃತಿಯಾಗಿದೆ. ಈ ಕೃತಿಯು ಪುರಾತತ್ವ ಹಾಗೂ ವಸ್ತು ಸಂಗ್ರಹಾಲಯಗಳ ನಿರ್ದೆಶನಾಲಯದ ವತಿಯಿಂದ, 1856 ಹಾಗೂ 1983ರಲ್ಲಿ ತೆಗೆದ ವಿಜಯನಗರದ (ಹಂಪಿಯ) ಸ್ಮಾರಕಗಳ ಸರಿಜೋಡಿಯ ಛಾಯಾಚಿತ್ರಗಳ ಪುಸ್ತಕವನ್ನಾಗಿ ಹೊರತಂದಿದೆ. ವಿಜಯನಗರವು ಭಾರತೀಯರನ್ನು ಹಾಗೂ ವಿದೇಶಿಯರನ್ನು ತನ್ನ ಉತ್ತುಂಗ ಸ್ಥಿತಿಯಲ್ಲಿ ಮತ್ತು ಭಗ್ನಾವಶೇಷ ಸ್ಥಿತಿಯಲ್ಲೂ ಒಂದೇ ರೀತಿಯಾಗಿ ಆಕರ್ಷಿಸಿದೆ. ಈ ನಗರದ ಭವ್ಯತೆಯ ಶ್ಲಾಘನೆಯನ್ನು ಅಬ್ದುರ್ ರಜಾಕ್, ಡೊಮಿಂಗೊ ಪೇಜ್, ನೂನಿಜ್ ಹಾಗೂ ಇತರ ಸಮಕಾಲೀನ ಪ್ರವಾಸಿಗರ ವರದಿಗಳಲ್ಲಿ ಓದಿ ತಿಳಿದುಕೊಳ್ಳಬೇಕಷ್ಟೆ. ಆದುದರಿಂದ ಅಲೆಕ್ಸಾಂಡರ್ ಜೆ. ಗ್ರೀನ್‌ಲಾ 1856 ರಷ್ಟು ಹಿಂದೆಯೇ ಛಾಯಾಚಿತ್ರಗಳ ಮೂಲಕ ಈ ಮಹಾನಗರದ ಸ್ಮಾರಕಗಳನ್ನು ದಾಖಲೆ ಮಾಡಿರುವುದು ಆಶ್ಚರ್ಯವೇನಲ್ಲ. ಭಾರತದಲ್ಲಿ ಛಾಯಾಚಿತ್ರಣವು ಶೈಶವಾವಸ್ಥೆಯಲ್ಲಿದ್ದಾಗ್ಯೂ ಈಸ್ಟ್ ಇಂಡಿಯಾ ಕಂಪನಿಯು ಈ ಮಹಾನಗರವನ್ನು ದಾಖಲೆಗಾಗಿ ಆಯ್ಕೆ ಮಾಡಿರುವುದನ್ನು ನೋಡಿದಾಗ ಆ ಸಮಯದಲ್ಲಿ ಸಹ ವಿಜಯನಗರವು ಎಂತಹ ಹೆಮ್ಮೆಯ ಸ್ಥಾನವನ್ನು ಹೊಂದಿತ್ತೆಂಬುದು ಕಂಡುಬರುತ್ತದೆ
©2025 Book Brahma Private Limited.