About the Author

ಎಂ.ಎಸ್.ಮೂರ್ತಿ- 1960ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಎಂ.ಎಸ್.ಮೂರ್ತಿ ಅವರು 1982ರಲ್ಲಿ 5 ವರ್ಷಗಳ ಚಿತ್ರಕಲೆ ಹಾಗೂ ಶಿಲ್ಪಕಲೆಯ ಡಿಪ್ಲಮಾ ವಿದ್ಯಾಬ್ಯಾಸ ಮಾಡಿದ್ದಾರೆ. ಕಾಲೇಜು ಶಿಕ್ಷಣದಲ್ಲಿ ಮನಃಶಾಸ್ತ್ರ ಅಭ್ಯಾಸ, ನಂತರ ಪತ್ರಿಕೋದ್ಯಮದಲ್ಲಿ ಇಲಸ್ಟೇಟರ್, ವಿನ್ಯಾಸಕಾರ ಹಾಗೂ ಕಲಾ ನಿರ್ದೇಶಕಾಗಿ ಉದ್ಯೋಗ, ಆನಂತರ ಉದ್ಯೋಗ ತ್ಯಜಿಸಿ ಪೂರ್ಣಾವಧಿ ಕಲಾವಿದನಾಗಿ ಅನೇಕ ಕಲಾ ಪ್ರಕಾರಗಳಲ್ಲಿ ಪ್ರಯೋಗ, ರಾಜ್ಯ ರಾಷ್ಟ್ರ, ಅಂತರಾಷ್ಟ್ರೀಯಮಟ್ಟದ ಕಲಾಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. 2003ರಲ್ಲಿ ಇರಾನ್ ದೇಶದ ಆಹ್ವಾನದ ಮೇರೆಗೆ ಅಂತರರಾಷ್ಟ್ರೀಯ ಕಲಾಪ್ರದರ್ಶನದಲ್ಲಿ ಭಾರತವೂ ಸೇರಿದಂತೆ ಅಂತರರಾಷ್ಟ್ರೀಯ ಬೈನಾಲೇ ಪ್ರಶಸ್ತಿ.(ಬುದ್ಧ ದ ಲೈಟ್ ಕೃತಿಗೆ) ದೆಹಲಿಯ ನ್ಯಾಶನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್ ಶಾಶ್ವತ ಕಲಾ ಸಂಗ್ರಹಾಲಯ ಸೇರಿದಂತೆ ಅಂತರರಾಷ್ಟ್ರೀಯ ಕಲಾ ಸಂಗ್ರಹಕಾರರಲ್ಲಿ ಕೃತಿಗಳು ಸಂಗ್ರಹಿಸಲ್ಪಟ್ಟಿವೆ. 

ರಾಜ್ಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ದೃಶ್ಯಪ್ರಜ್ಞೆ ಪುನಶ್ಚೇತನಕ್ಕಾಗಿ ರೈತರೊಂದಿಗೆ ಸಂವಾದದ ಮೂಲಕ ದೃಶ್ಯ ಚಳುವಳಿಯ ಕಾರ್ಯಕ್ರಮ, ಬೆಂಗಳೂರಿನ ಭೂಮಿ ಕಲಾವಿದರ ತಾಣದಲ್ಲಿ ನೆಲೆಗೊಂಡಿರುವ ಮೂರ್ತಿಯವರು ಕಲಾವಿದ್ಯಾರ್ಥಿಗಳಿಗಾಗಿ ಮ್ಯೂರಲ್ ಇಲಸ್ಟ್ರೇಷನ್ ಮತ್ತು ಕಲಾವಿಕಾಸದಂತಹ ಶಿಬಿರಗಳ ನಿರ್ದೇಶನ, ಮಕ್ಕಳ ಚಿತ್ರಕಲೆ ಕುರಿತಂತೆ ಪೋಷಕರಿಗೆ ಕೌನ್ಸಲಿಂಗ್, ಲಂಕೇಶ್, ಉದಯವಾಣಿ, ತರಂಗ ಇತ್ಯಾದಿ ಪತ್ರಿಕೆಗಳಲ್ಲಿ ಲೇಖನ, ಪದ್ಯಗಳ ಪ್ರಕಟಣೆ. ಯಶೋಧರೆ ಮಲಗಿರಲಿಲ್ಲ ನಾಟಕಕ್ಕಾಗಿ ಬೆಂಗಳೂರು ಆಕಾಶವಾಣಿಯ ಪ್ರಾದೇಶಿಕ ಉತ್ತಮ ನಾಟಕ ಪ್ರಶಸ್ತಿ ಮತ್ತು ದೇಸಿ ನಗು ಕೃತಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2006ರ ಪುಸ್ತಕ ಬಹುಮಾನಗಳು ಸಂದಿವೆ. 

ಪ್ರಸ್ತುತ ನಿಶ್ಯಬ್ದ ಕುರಿತ ಸರಣಿ ಕಲಾಕೃತಿಗಳ ರಚನೆಯಲ್ಲಿ ತೊಡಗಿದ್ದಾರೆ. ಹಂಪಿ ವಿಶ್ವವಿದ್ಯಾನಿಲಯದಿಂದ ಮಕ್ಕಳ ಚಿತ್ರಕಲೆ ಕುರಿತ ಪ್ರಬಂಧಕ್ಕಾಗಿ ಡಿ.ಲಿಟ್ ಪದವಿ ಸಂದಿವೆ. ಪುಸ್ತಕ ಪ್ರಪಂಚದ ಮೊತ್ತ ಮೊದಲ ದೃಶ್ಯ ಕಾದಂಬರಿಯನ್ನು ಬರೆದಿದ್ದಾರೆ. 

ಎಂ.ಎಸ್.ಮೂರ್ತಿ

ABOUT THE AUTHOR