ಬೌಲ್‌

Author : ಎಂ.ಎಸ್.ಮೂರ್ತಿ

Pages 240

₹ 250.00




Year of Publication: 2022
Published by: ಕಿ. ರಂ. ಪ್ರಕಾಶನ
Address: ನಂ. 173, 7ನೇ ಮುಖ್ಯರಸ್ತೆ, 24ನೇ \'ಸಿ\' ಕ್ರಾಸ್ ನಾಗರಬಾವಿ ಮುಖ್ಯರಸ್ತೆ, ಗೋವಿಂದರಾಜನಗರ, ಬೆಂಗಳೂರು - 560 079
Phone: 9844467351

Synopsys

'ಬೌಲ್' ಎಂ.ಎಸ್.ಮೂರ್ತಿಯವರ ಕಾದಂಬರಿ. ಇದು ಒಂದು ಅನನ್ಯ ಕೃತಿಯಾಗಿದ್ದು ಅದು ಪ್ರಾಚೀನ ವ್ಯಕ್ತಿತ್ವಗಳನ್ನು ಆಧುನಿಕ ಸಂವೇದನೆಯೊಂದಿಗೆ ಸುಂದರವಾಗಿ ಮರುಸೃಷ್ಟಿಸುತ್ತದೆ, ಬುದ್ಧ, ಆನಂದ, ಜಗತ್ತಿನ ಸಕಲ ತಾಯಂದಿರು ಇವರೆಲ್ಲ ಸಮಕಾಲೀನ ಪ್ರಪಂಚದ ಸಾಮಾನ್ಯ ಮನುಷ್ಯರೊಂದಿಗೆ ಪರಸ್ಪರ ಸಂಬಂಧ ಹೊಂದಿದ್ದಾರೆ. ಈ ಸಾಮಾನ್ಯ ಮನುಷ್ಯರು ಅಸಾಮಾನ್ಯ ಅನ್ವೇಷಕರಾಗಿ ವರ್ತಮಾನದ ಬುದ್ಧರಾಗುವವರು ಹಾಗೂ ಆ ಕಾಲಾತೀತ ಚೇತನದ ಅನಂತವಾದ ಮತ್ತು ಶಾಶ್ವತವಾದ ನವೀಕರಣದ ಮೂಲಕ ಮಾತ್ರವೇ ಈ ಪರಭಕ್ಷಕ ಪ್ರಪಂಚವು ತನ್ನ ಮೋಕ್ಷವನ್ನು ಹುಡುಕಿಕೊಳ್ಳಬಹುದು. ಇದರ ಅಗಾಧವಾದ ಪರಿಣಾಮ ಯಾವುದೆಂದರೆ ಅನಂತಕಾಲದ ಇರುವಿಕೆ.  ಕಾದಂಬರಿಯಲ್ಲಿ ಬರುವ ಮುದುಕ ಆತ ಭೂತ, ವರ್ತಮಾನ ಮತ್ತು ಭವಿಷ್ಯಕ್ಕೆ ನೇರ ಪೂರಕಸಾಕ್ಷಿಯಾಗಿದ್ದಾನೆ. ಮೂಲತಃ ಬೌಲ್ ಕೃತಿಯ ಕೇಂದ್ರಬಿಂದುವೇ ವರ್ತಮಾನವನ್ನು ಅಭಿನಂದಿಸುತ್ತಲೇ ಭವಿಷ್ಯದೊಳಗೆ ಕೊಂಡೊಯ್ಯುವ ಈ ಗೌರವಾನ್ವಿತ ವಯೋವೃದ್ಧ 'ಅಜ್ಜ’. ಇದೊಂದು ಮೂಲಭೂತವಾದ ತಾತ್ವಿಕ ವಿಚಾರಗಳನ್ನು ಅಪ್ಪಿಕೊಳ್ಳುವ ಸುಂದರ ಕಲಾಕೃತಿಯಾಗಿದೆ. ಈ ಕೃತಿಯ ಮೂಲಕ ಎಂ.ಎಸ್.ಮೂರ್ತಿಯವರು ಅತ್ಯಂತ ಸಮರ್ಥ ರಿತಿಯಲ್ಲಿ ನಮ್ಮ ಪ್ರಜ್ಞೆಯನ್ನು ಅರಳಿಸುವ ಕೆಲಸ ಮಾಡಿದ್ದಾರೆ ಎಂದು ಮುನ್ನುಡಿಯಲ್ಲಿ ಹೇಳಲಾಗಿದೆ. 

About the Author

ಎಂ.ಎಸ್.ಮೂರ್ತಿ

ಎಂ.ಎಸ್.ಮೂರ್ತಿ- 1960ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಎಂ.ಎಸ್.ಮೂರ್ತಿ ಅವರು 1982ರಲ್ಲಿ 5 ವರ್ಷಗಳ ಚಿತ್ರಕಲೆ ಹಾಗೂ ಶಿಲ್ಪಕಲೆಯ ಡಿಪ್ಲಮಾ ವಿದ್ಯಾಬ್ಯಾಸ ಮಾಡಿದ್ದಾರೆ. ಕಾಲೇಜು ಶಿಕ್ಷಣದಲ್ಲಿ ಮನಃಶಾಸ್ತ್ರ ಅಭ್ಯಾಸ, ನಂತರ ಪತ್ರಿಕೋದ್ಯಮದಲ್ಲಿ ಇಲಸ್ಟೇಟರ್, ವಿನ್ಯಾಸಕಾರ ಹಾಗೂ ಕಲಾ ನಿರ್ದೇಶಕಾಗಿ ಉದ್ಯೋಗ, ಆನಂತರ ಉದ್ಯೋಗ ತ್ಯಜಿಸಿ ಪೂರ್ಣಾವಧಿ ಕಲಾವಿದನಾಗಿ ಅನೇಕ ಕಲಾ ಪ್ರಕಾರಗಳಲ್ಲಿ ಪ್ರಯೋಗ, ರಾಜ್ಯ ರಾಷ್ಟ್ರ, ಅಂತರಾಷ್ಟ್ರೀಯಮಟ್ಟದ ಕಲಾಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. 2003ರಲ್ಲಿ ಇರಾನ್ ದೇಶದ ಆಹ್ವಾನದ ಮೇರೆಗೆ ಅಂತರರಾಷ್ಟ್ರೀಯ ಕಲಾಪ್ರದರ್ಶನದಲ್ಲಿ ಭಾರತವೂ ಸೇರಿದಂತೆ ಅಂತರರಾಷ್ಟ್ರೀಯ ಬೈನಾಲೇ ಪ್ರಶಸ್ತಿ.(ಬುದ್ಧ ದ ಲೈಟ್ ಕೃತಿಗೆ) ದೆಹಲಿಯ ನ್ಯಾಶನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್ ಶಾಶ್ವತ ...

READ MORE

Related Books