About the Author

ಸಂಶೋಧಕ, ಕವಿ, ಬರಹಗಾರ ಡಾ.ಎಂ.ಎಸ್.ಶೇಖರ್ ಅವರು 1964 ರಲ್ಲಿ ಹಾಸನ ಜಿಲ್ಲೆಯ ಹಾಸನ ತಾಲೂಕಿನ ಮಲ್ಲಿಗೆವಾಳು ಗ್ರಾಮದಲ್ಲಿ ಜನಿಸಿದರು. ತಂದೆ ಸಿದ್ದಯ್ಯ, ತಾಯಿ ದೇವಮ್ಮ. ಆಲೂರು, ಹಾಸನದಲ್ಲಿ ಪ್ರಾಥಮಿಕದಿಂದ ಪದವಿವರೆಗೂ ಶಿಕ್ಷಣ ಪೂರೈಸಿದರು.  ಮೈಸೂರು ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ ಪದವೀಧರರಾದರು. 1992 ರಲ್ಲಿ ಹಾಸನದ ಹೇಮಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಉಪನ್ಯಾಸಕರಾದರು. 1994 ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದಿಂದ ಪಿ.ಎಚ್.ಡಿ ಪಡೆದರು. ಮಂಡ್ಯದ ಸರ್.ಎಂ.ವಿ ಸ್ನಾತಕೋತ್ತರ ಕೇಂದ್ರದ ಸಂಯೋಜಕರಾಗಿ ಹಾಗೂ ಮುಖ್ಯಸ್ಥರಾಗಿ (2010 ರಿಂದ 2012) ನಂತರ ಹಾಸನದ ಹೇಮಗಂಗೋತ್ರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೃತಿಗಳು: 1997 ರಲ್ಲಿ ‘ನಾರಾಯಣ ಗುರುವಿನ ನಾಡಿನಲ್ಲಿ’ ಪ್ರವಾಸ ಕಥನ. ‘ಗ್ರಹಿಕೆ’-1997 (ವಿಮರ್ಶೆ), ‘ನಮ್ಮ ಮುಸ್ಲಿಂ ಹಿನ್ನೆಲೆಯ ಜಾನಪದ ಕಥೆಗಳು’(2001), ‘ಕಣ್ಣು ಕಂಡಷ್ಟು’(ವಿಮರ್ಶೆ-2002), ‘ಜಾನಪದ ಜಾದೂಗಾರ ಸಹೀದ್ ಹುಸೇನ್’(2002), ‘ಶ್ರೀಕೃಷ್ಣ ಆಲನಹಳ್ಳಿ ಅವರ ಸಾಹಿತ್ಯ’(ಸಂಶೋಧನೆ-2002), ‘ಅನಿಕೇತನ’(ಕರ್ನಾಟಕ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ-ಸಂಪಾದನೆ-2005), ‘ಹೊಯ್ಸಳ ದೀಪ್ತಿ’(ಸಂಪಾದನೆ-2006), ‘ಆಧುನಿಕಸಾಹಿತ್ಯದ ಮೊದಲ ತಲೆಮಾರಿನ ಲೇಖಕರು’(ಸಂಪಾದಿತ-2006), ‘ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಾನವಪರ ಧೋರಣೆಗಳು’(ಸಂಪಾದಿತ-2006), ‘ಹೊಯ್ಸಳ ದರ್ಪಣ’(ಸಂಪಾದಿತ-2006),  ‘ಡಿ.ಗೋವಿಂದಾಸ್ ಅವರ ಸಮಗ್ರ ಸಾಹಿತ್ಯ ಸಂಪುಟ’(ಸಂಶೋಧನೆ-2007), ‘ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಹಿಳಾಪರ ಕಾಳಜಿಗಳು’(ಸಂಪಾದಿತ-2007), ‘ಕುದ್ಮುಲ್ ರಂಗರಾಯರು’(ಜೀವನ ಚರಿತ್ರೆ-2008), ‘ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಜಾನಪದ ಪ್ರಜ್ಞೆ’(ಸಂಪಾದಿತ-2008), ‘ಸಂಸ್ಕೃತಿ  ಮಹಿಳಾ ಮಾಲಿಕೆ  ಸಂ-2(2008), ‘ಗರಿಕೆ’(ಕಾವ್ಯ-2010) 
13 ನೆಯ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.  2003 ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪುಸ್ತಕ ಪ್ರಶಸ್ತಿ, 2010 ರಲ್ಲಿ ದಲಿತ ಸಾಹಿತ್ಯ ಪರಿಷತ್ತು ಕಾವ್ಯ ಪ್ರಶಸ್ತಿ, 2012 ರಲ್ಲಿ ಕೆ.ಎಸ್.ನರಸಿಂಹಸ್ವಾಮಿ ಕಾವ್ಯ ಪ್ರಶಸ್ತಿ, 2012 ರಲ್ಲಿ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು. 

 

ಎಂ.ಎಸ್. ಶೇಖರ್